
ನಾನೇನು ಸುಮ್ನೆ ಅಲ್ಲ ಕಣೋ. ಬಹುತ್ ಬದ್ಮಾಷ್ ಹೈ. ನಿನ್ ಎದುರೀಗ್ ಅಷ್ಟೇ ಒಳ್ಳೆ ಅಮಾಯಕನ ತರ ಕಾಣಿಸೋದು ನನ್ನಲ್ಲೂ ಎಲ್ಲ ಹೋರಿ ಗುಣಗಳು ಇವೆ, ಮೇಲೆ ಮಾತ್ರ ಆಕಳ ತರ ಕಾಣಿಸುತ್ತೇನೆ ಅಷ್ಟೇ. ನಾನು ಬುದ್ದ್ಡಿವಂತನು ಅಲ್ಲ, ದಡ್ಡನು ಅಲ್ಲ. ಯಾಕಂದ್ರೆ, ನನಗೆ ಅದು ಗೊತ್ತಿದೆ, ಇದು ಗೊತ್ತಿದೆ ಎಂದು ಸಮಯ ಸಿಕ್ಕಾಗಲೆಲ್ಲ, ಬಕ್ರಾಗಳು ಸಿಕ್ಕಾಗಲೆಲ್ಲ ಜಂಭ ಕೊಚ್ಚಿಕೊಳ್ಳುತ್ತಾ ಇರುವೆನಲ್ಲ ಅದಕ್ಕೆ. ನೀನೇ ಬುದ್ಧಿವಂತ ಎಂದು ಸಹ ನಾನು ಹೇಳುವುದಿಲ್ಲ. ಯಾಕಂದ್ರೆ ನೀನು ಎಷ್ಟು ಬುದ್ಧಿವಂತ ಎಂದು ನಿನಗಿಂತ ಚನ್ನಾಗಿ ಬೇರೆ ಯಾರು ಅರ್ಥ ಮಾಡಿಕೊಳ್ಳಲು ಆಗುವುದಿಲ್ಲವಲ್ಲ ಅದಕ್ಕೆ. ಸಮಯದ ಮಹತ್ವ ನನಗೆ ತಿಳಿದಿಲ್ಲ. ಒಂದು ವೇಳೆ ತಿಳಿದರು ಸಹ ನಾನು ಸಮಯಕ್ಕೆ ಬೆಲೆ ಕೊಡುವವನಲ್ಲ. ಎ ಸುಮ್ನೆ ಇರೋ ಸಮಯ, ಸಂಯೋಜನೆ, ತಾಳ, ಮೇಳ, ರಾಗ ಅವೆಲ್ಲ ಓದಿ ಓದಿ ಸಾಕಾಗಿದೆ. ಇನ್ನೇನಿದ್ದ್ಡರು ನನಗೇನು ಅನ್ನಿಸುವುದೋ ಅದನ್ನೇ ಮಾಡುತ್ತಿರುವುದಷ್ಟೆ. ಬಹಳ ಸಮಯವಂತೂ ಬೇಕಾಗಿಲ್ಲ. ಇನ್ನೊಬ್ಬರು ಹೇಳಿದ ಮಾತಿನ ಪ್ರಕಾರ ಕ್ರಮ ಬದ್ಧವಾಗಿ ನಡೆಯುವುದೇನು ಹೆಚ್ಚು ಸಮಯ ಬೇಕಾಗಿಲ್ಲ.ಅಪ್ಪ ಸಾಕಾಯ್ತು ಕಣೋ ಹೊಟ್ಟೆ ಹಸಿವಾಗ್ತಿದೆ ನಾನಿನ್ನು ಮನೆಗೆ ಹೋಗ್ತೀನಿ.