Snap Deal Search

ಜಟಿಲ

ಸುಲಭವಾಗಿ ಸಿಗೋದು ಹತ್ತು ಪಡೆದರೇನಂತೆ,
ಜಟಿಲ, ಕಠಿಣ, ಕಷ್ಟ ಇರುವಂತಹದೊಂದೇ ಪಡೆಯುವುದರಲ್ಲಿ ಹೆಗ್ಗಳಿಕೆ ಇದೆ.

ವ್ಯಕ್ತಿ

ನಾನು ನನ್ನಲ್ಲಿ ಇರುವ ತನಕ ಮಾತ್ರ ನಾನೊಬ್ಬ ವ್ಯಕ್ತಿ.

ಮೂಲ

" ಕುತೂಹಲವೇ ನಮ್ಮ ಬುದ್ಧಿಗೆ ಮೂಲ.
ಯಾವುದೆ ಸಂಗತಿಯನ್ನು ಒಪ್ಪಿಕೊಳ್ಳುವ ಮುನ್ನ
ಪರಾಮರ್ಶಿಸುವ  ರೂಢಿ ಬೆಳೆಸಿಕೊಳ್ಳೋಣ. "
                                     ಕೃಪೆ  - ವಿಜಯವಾಣಿ ದಿನ ಪತ್ರಿಕೆ

ಕ್ಷೇತ್ರ

ನಿಮ್ಮ ಪ್ಯಾಶನ್ ಯಾವುದು ಅಂತ ಮೊದಲು ತಿಳಿದುಕೊಳ್ಳಿ ನಂತರ ನಿಮ್ಮ ಆಸಕ್ತಿ ಇರುವ ಕ್ಷೇತ್ರ ಯಾವುದು ಅಂತ ತಿಳಿದುಕೊಳ್ಳಿ ಅಲ್ಲಿ ನಾನು ಯಾವ ಮಟ್ಟಕ್ಕೆ ಬೆಳೆಯಬಲ್ಲೆ ಎಂಬುದನ್ನು ಚಿಂತಿಸಿ ದಾರಿ ನಿಮ್ಮ ಮುಂದೆ ತಾನಾಗಿಯೇ ತೆರದುಕೋಳ್ಳುತ್ತದೆ.

ಪ್ರಚಂಡ

ನಾನಂದುಕೊಂಡಿದ್ದೆ ನಾನು ಎಲ್ಲರಿಗಿಂತ ಕೊಂಚ ಭಿನ್ನವೆಂದು,
ಆದರೆ, ನನಗೆ ಕೊನೆಗೂ ತಿಳಿಯಲಾಗಲಿಲ್ಲ
ನಾನು ಕೊಂಚವಲ್ಲ ಪ್ರಚಂಡ ಹುಚ್ಚನೆಂದು.

ಸಕರಾತ್ಮಕ ಯೋಚನೆ

ನನಗೆ ಇತ್ತೀಚೆಗೇಕೊ ರಾತ್ರಿ ಒಂದು ಗಂಟೆಯಾದರೂ ನಿದ್ದೆ ಬರುತ್ತಿಲ್ಲ. ಸಕರಾತ್ಮಕ ಯೋಚನೆ ಬಂದು ಏನಾದರೂ ಸಿದ್ಧಿಸಿಕೊಳ್ಳೋಣ ಎಂದೆನಿಸುತ್ತೆ. ಆದರೆ, ಯಾವುದನ್ನು ಆಯ್ಕೆ ಮಾಡಿಕೊಳ್ಳುವುದೆಂದೇ ತಿಳಿಯುತ್ತಿಲ್ಲ.

ಸುಖವೇ ಸಿಗಲೆಂದು

ನಾನು ಮಾಡ್ತಿರೋದೆ ಸರಿ ಇಲ್ಲ ಅಂದಮೇಲೆ
ನನಗೆ ಬರೀ ಸುಖವೇ ಸಿಗಲೆಂದು ನಾನು ಬಯಸುವುದು,
ಇದು ಎಷ್ಟರ ಮಟ್ಟಿಗೆ ಸರಿ ???