Snap Deal Search

ಕಷ್ಟ

ಬೆಲೆಯಿಲ್ಲ........!!!

ಕಷ್ಟ ಅಂತ ಹೋದ್ರೆ ಯಾರು ಸಹಾಯ ಮಾಡಲ್ಲ..!

ಇಷ್ಟ ಅಂತ ಹೇಳಿದ್ರೆ ಯಾರು ಪ್ರೀತಿ ತೋರಿಸಲ್ಲ..!
ಅದಕ್ಕೆ ಹೇಳೋದು ಕಷ್ಟನಾ ತೋರಿಸಿಕೊಳ್ಳಬಾರದು,
ಇಷ್ಟಾನಾ ಹೇಳಿಕೊಳ್ಳಬಾರದು../
ಕಷ್ಟಕ್ಕೆ ಕರುಣೆಯಿಲ್ಲ...
ಇಷ್ಟಕ್ಕೆ ಬೆಲೆಯಿಲ್ಲ...

ನಾನೆಂದುಕೊಂಡಲ್ಲಿ.......

ನಾನೆಂದುಕೊಂಡಲ್ಲಿ ಮಾತ್ರ.....

ಜೇಬಲ್ಲಿ ಒಂದು ರೂಪಾಯಿ ಕಾಸು ಇಲ್ದೆ ಇದ್ರು ದುರಹಂಕಾರಕ್ಕೇನೂ ಕಡಿಮೆಯಿಲ್ಲ !
ಅಹಂಕಾರವೇ ತುಂಬಿ ಹೋಗಿರುವ ಆ ದೇಹಗಳಿಗೆ,
ತಾನೇ ಸರಿ ಎಂದು ಬೀಗುವ ಹೊಂಬುತನಗಳಿಗೆ,
ಹುಚ್ಚು ಭ್ರಮೆಯಲ್ಲಿ ತೇಲಾಡುತ್ತಿರುವ ಮೂರ್ಖರಿಗೆ,
ಕಾಮಾಲೋಚನೆಯಲ್ಲಿಯೇ ದಿನಗಳೆಯುತ್ತಿರುವ ಮೂಢರಿಗೆ,
ಪರನಿಂದೆ ಮಾಡುತ್ತಲೇ ತನ್ನ ತನವ ಕಳೆದುಕೊಳ್ಳುವ ಖೌಂಟ್ಗಳಿಗೆ,
ಬದ್ಮಾಸ್ ಜಾತಿಗೆ ಸೇರಿರುವ ಖೋಡಿಗಳಿಗೆ,
ಮೂರಾದಿ ಸೇರುವ ಜಾಗದಲ್ಲಿ ಕರೆದು,
ಎನ್ನ ಅಂಬಿಗರ ಚೌಡಯ್ಯನ ಬೈಗುಳದಂತೆ,
ಲೊಟಲೊಟನೆ ಕಿತ್ತು ಹೋಗಿರುವ ಚಪ್ಪಲಿಯಿಂದ ಹೊಡೆಯಬೇಕು. !!!

ಸಾಹಿತ್ಯ ಕೃತಿಗಳು

ಕನ್ನಡದ 100 ಶ್ರೇಷ್ಠ ಸಾಹಿತ್ಯ ಕೃತಿಗಳು
💐💐💐💐💐💐💐💐💐💐💐💐💐💐
1.ಕಾನೂರು ಹೆಗ್ಗಡಿತಿ - ಕುವೆ೦ಪು
2.ಮಲೆಗಳಲ್ಲಿ ಮದುಮಗಳು - ಕುವೆ೦ಪು
3.ಚಿದಂಬರ ರಹಸ್ಯ - ಪೂರ್ಣಚಂದ್ರ ತೇಜಸ್ವಿ
4. ಜುಗಾರಿ ಕ್ರಾಸ್ - ಪೂರ್ಣಚಂದ್ರ ತೇಜಸ್ವಿ
3.ಮರಳಿ ಮಣ್ಣಿಗೆ - ಡಾ. ಕೆ. ಶಿವರಾಮ ಕಾರಂತ
4.ಚೋಮನ ದುಡಿ - ಡಾ. ಕೆ. ಶಿವರಾಮ ಕಾರಂತ
5.ಚಿಕವೀರ ರಾಜೇಂದ್ರ - ಮಾಸ್ತಿ ವೆಂಕಟೇಶ ಅಯ್ಯಂಗಾರ್
6.ಮೂಕಜ್ಜಿಯ ಕನಸುಗಳು - ಡಾ. ಕೆ. ಶಿವರಾಮ ಕಾರಂತ
7.ಬೆಟ್ಟದ ಜೀವ - ಡಾ. ಕೆ. ಶಿವರಾಮ ಕಾರಂತ
8.ಮಹಾಬ್ರಾಹ್ಮಣ - ದೇವುಡು ನರಸಿಂಹ ಶಾಸ್ತ್ರಿ
9.ಸಂಧ್ಯಾರಾಗ - ಅ.ನ. ಕೃಷ್ಣರಾಯ
10.ದುರ್ಗಾಸ್ತಮಾನ - ತ.ರಾ. ಸುಬ್ಬರಾವ್
11.ಗ್ರಾಮಾಯಣ - ರಾವ್ ಬಹದ್ದೂರ್
12.ಶಾಂತಲಾ - ಕೆ.ವಿ. ಅಯ್ಯರ್
13.ಸಂಸ್ಕಾರ - ಯು.ಆರ್. ಅನಂತಮೂರ್ತಿ
14.ಗಂಗವ್ವ ಮತ್ತು ಗಂಗಾಮಾಯಿ - ಶಂಕರ ಮೊಕಾಶಿ ಪುಣೇಕರ
15.ಗೃಹಭಂಗ - ಎಸ್.ಎಲ್. ಭೈರಪ್ಪ
16.ಮುಕ್ತಿ - ಶಾಂತಿನಾಥ ದೇಸಾಯಿ
17.ವೈಶಾಖ - ಚದುರಂಗ
18.ಮೃತ್ಯುಂಜಯ - ನಿರಂಜನ
19.ಚಿರಸ್ಮರಣೆ - ನಿರಂಜನ
20.ಶಿಕಾರಿ - ಯಶವಂತ ಚಿತ್ತಾಲ
21.ಮಾಡಿದ್ದುಣ್ಣೋ ಮಹಾರಾಯ - ಎಂ.ಎಸ್. ಪುಟ್ಟಣ್ಣಯ್ಯ
22.ಕಾಡು - ಶ್ರೀಕೃಷ್ಣ ಆಲನಹಳ್ಳಿ
23.ಕರ್ವಾಲೊ - ಕೆ.ಪಿ. ಪೂರ್ಣಚಂದ್ರ ತೇಜಸ್ವಿ
24.ಬಂಡಾಯ - ವ್ಯಾಸರಾಯ ಬಲ್ಲಾಳ
25.ತೇರು - ರಾಘವೇಂದ್ರ ಪಾಟೀಲ
26.ದ್ಯಾವನೂರು - ದೇವನೂರು ಮಹಾದೇವ
27.ಚಂದ್ರಗಿರಿಯ ತೀರದಲ್ಲಿ - ಸಾರಾ ಅಬೂಬಕ್ಕರ್
28.ಇಜ್ಜೋಡು - ವಿ.ಕೃ. ಗೋಕಾಕ್
29.ಬದುಕು - ಗೀತಾ ನಾಗಭೂಷಣ
30.ಮಾಧವ ಕರುಣಾ ವಿಲಾಸ - ಗಳಗನಾಥ
31.ಬೆಕ್ಕಿನ ಕಣ್ಣು - ತ್ರಿವೇಣಿ
32.ಮುಸ್ಸಂಜೆಯ ಕಥಾ ಪ್ರಸಂಗ - ಪಿ. ಲಂಕೇಶ
33.ಮಾಡಿ ಮಡಿದವರು - ಬಸವರಾಜ ಕಟ್ಟೀಮನಿ
34.ಅನ್ನ - ರ೦.ಶ್ರೀ.ಮುಗಳಿ
35.ಮೋಹಿನಿ - ವಿ. ಎಂ. ಇನಾಂದಾರ್
36.ಚಿದಂಬರ ರಹಸ್ಯ - ಕೆ.ಪಿ. ಪೂರ್ಣಚಂದ್ರ ತೇಜಸ್ವಿ
ಕಥಾ ಸ೦ಕಲನಗಳು
37.ಮಾಸ್ತಿ ಅವರ ಸಮಗ್ರ ಕತೆಗಳು - ಮಾಸ್ತಿ ವೆಂಕಟೇಶ ಅಯ್ಯಂಗಾರ್
38.ನೇಮಿಚಂದ್ರರ ಕಥೆಗಳು - ನೇಮಿಚಂದ್ರ
39.ಕಲ್ಲು ಕರಗುವ ಸಮಯ - ಪಿ. ಲ೦ಕೇಶ
40.ಅಮೃತಬಳ್ಳಿ ಕಷಾಯ - ಜಯಂತ ಕಾಯ್ಕಿಣಿ
41.ಹುಲಿ ಸವಾರಿ - ವಿವೇಕ ಶಾನುಭಾಗ
42.ಬುಗುರಿ - ಮೊಗಳ್ಳಿ ಗಣೇಶ್
43.ತಮಂಧದ ಕೇಡು - ಅಮರೇಶ ನುಗುಡೋಣಿ
44.ಅನಂತಮೂರ್ತಿ: ಐದು ದಶಕದ ಕಥೆಗಳು - ಯು.ಆರ್. ಅನಂತಮೂರ್ತಿ
45.ಜಿ.ಎಸ್. ಸದಾಶಿವ: ಇದುವರೆಗಿನ ಕಥೆಗಳು
46.ಖಾಸನೀಸರ ಕಥೆಗಳು
47.ಕೆ. ಸದಾಶಿವ ಸಮಗ್ರ ಕತೆಗಳು
48.ಭಳಾರೆ ವಿಚಿತ್ರಂ - ಕುಂ.ವೀರಭದ್ರಪ್ಪ
49.ಪಾವೆಂ ಹೇಳಿದ ಕಥೆ - ರವಿ ಬೆಳಗೆರೆ
50.ಮಾಯಿಯ ಮುಖಗಳು - ರಾಘವೇಂದ್ರ ಪಾಟೀಲ
51.ಚಿತ್ತಾಲರ ಕತೆಗಳು - ಯಶವಂತ ಚಿತ್ತಾಲ
52.ದಜ್ಜಾಲ - ಫಕೀರ್ ಮುಹಮ್ಮದ್ ಕಟ್ಪಾಡಿ
53.ಕನ್ನಂಬಾಡಿ - ಡಾ. ಬೆಸಗರಹಳ್ಳಿ ರಾಮಣ್ಣ
54.ಅಮ್ಮಚ್ಚಿಯೆಂಬ ನೆನಪು - ವೈದೇಹಿ
ಕವನ ಸ೦ಕಲನಗಳು
55.ಔದುಂಬರಗಾಥೆ - ದ.ರಾ.ಬೇ೦ದ್ರೆ
56.ಸಮಗ್ರ ಕಾವ್ಯ - ಗೋಪಾಲಕೃಷ್ಣ ಅಡಿಗ
57.ಹೊ೦ಬೆಳಕು - ಚನ್ನವೀರ ಕಣವಿ
58.ಹಾಡು-ಹಸೆ: ಕೆ.ಎಸ್.ನರಸಿಂಹಸ್ವಾಮಿ ಆಯ್ದ ಕವಿತೆಗಳು
59.ಜಿ.ಎಸ್. ಶಿವರುದ್ರಪ್ಪ ಸಮಗ್ರ ಕಾವ್ಯ
60.ಕೆ.ಎಸ್. ನಿಸಾರ್ ಅಹಮದ್ ಸಮಗ್ರ ಕವಿತೆಗಳು
61.ಮೂವತ್ತು ಮಳೆಗಾಲ - ಎಚ್.ಎಸ್. ವೆಂಕಟೇಶಮೂರ್ತಿ
62.ಮೆರವಣಿಗೆ - ಡಾ. ಸಿದ್ಧಲಿಂಗಯ್ಯ
63.ಬೆಳ್ಳಕ್ಕಿ ಹಿಂಡು - ಸುಬ್ಬಣ ರಂಗನಾಥ ಎಕ್ಕುಂಡಿ
64.ತಟ್ಟು ಚಪ್ಪಾಳೆ ಪುಟ್ಟ ಮಗು - ಬೊಳುವಾರು ಮಹಮದ್ ಕುಂಞಿ
65.ಕುವೆಂಪು ಸಮಗ್ರ ಕಾವ್ಯ - ಕುವೆ೦ಪು
66.ಕ್ಯಾಮೆರಾ ಕಣ್ಣು : ಬಿ.ಆರ್.ಲಕ್ಷ್ಮಣ ರಾವ್ ಸಮಗ್ರ ಕಾವ್ಯ
67.ರತ್ನನ ಪದಗಳು,ನಾಗನ ಪದಗಳು - ಜಿ.ಪಿ. ರಾಜರತ್ನಂ
68.ಪಾಂಚಾಲಿ: ಆಯ್ದ ಕವನಗಳು - ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ
69.ಹೊಂಗನಸು - ಬಿಎಂಶ್ರೀ
70. ಪರ್ವ - ಎಸ್.ಎಲ್.ಭೈರಪ್ಪ
71.ಗಜಲ್ ಮತ್ತು ದ್ವಿಪದಿಗಳು: ಶಾಂತರಸ
72.ಗೌರೀಶ್ ಕಾಯ್ಕಿಣಿ ಸಮಗ್ರ ಸಾಹಿತ್ಯ
73.ಮ೦ಕುತಿಮ್ಮನ ಕಗ್ಗ - ಡಿ.ವಿ.ಗು೦ಡಪ್ಪ
74.ಈವರೆಗಿನ ಹೇಳತೇನ ಕೇಳ - ಡಾ.ಚಂದ್ರಶೇಖರ ಕಂಬಾರ
ನಾಟಕಗಳು
75.ಪುತಿನ ಸಮಗ್ರ ಗೇಯ ಕಾವ್ಯ ನಾಟಕಗಳು - ಪು.ತಿ. ನರಸಿಂಹಾಚಾರ್
76.ಕೈಲಾಸಂ ಕನ್ನಡ ನಾಟಕಗಳು - ಟಿ.ಪಿ.ಕೈಲಾಸ೦
77.ಶೋಕಚಕ್ರ - ಶ್ರೀರ೦ಗ
78.ಕಾಕನಕೋಟೆ - ಮಾಸ್ತಿ ವೆಂಕಟೇಶ ಅಯ್ಯಂಗಾರ್
79. ಆವರಣ - ಎಸ್.ಎಲ್.ಭೈರಪ್ಪ
80.ತುಘಲಕ್ - ಗಿರೀಶ ಕಾರ್ನಾಡ
81.ಸಂಸ ನಾಟಕಗಳು - ಸ೦ಸ
82.ಮಹಾಚೈತ್ರ - ಎಚ್. ಎಸ್. ಶಿವಪ್ರಕಾಶ
83.ಸಿರಿಸ೦ಪಿಗೆ - ಚ೦ದ್ರಶೇಖರ ಕ೦ಬಾರ
84.ಸಂಕ್ರಾಂತಿ - ಪಿ. ಲ೦ಕೇಶ
ಇತರೆ/ವ್ಯಕ್ತಿಚಿತ್ರಣ/ಆತ್ಮಚರಿತ್ರೆ/ವಿಜ್ಞಾನ/ಪ್ರವಾಸ ಕಥನ/ವಿಮರ್ಶೆ
85.ಜ್ಞಾಪಕ ಚಿತ್ರಶಾಲೆ - ಡಿ. ವಿ. ಗು೦ಡಪ್ಪ
86.ಮೂರು ತಲೆಮಾರು - ತ.ಸು. ಶಾಮರಾಯ
87.ಮರೆಯಲಾದೀತೆ? - ಬೆಳಗೆರೆ ಕೃಷ್ಣಶಾಸ್ತ್ರಿ
88.ದೇವರು - ಎ.ಎನ್. ಮೂರ್ತಿರಾವ್
89.ಇರುವುದೊಂದೇ ಭೂಮಿ - ನಾಗೇಶ ಹೆಗಡೆ
90.ಅಣ್ಣನ ನೆನಪು - ಕೆ.ಪಿ ಪೂರ್ಣಚ೦ದ್ರ ತೇಜಸ್ವಿ
91.ನಮ್ಮ ಊರಿನ ರಸಿಕರು - ಗೊರೂರು ರಾಮಸ್ವಾಮಿ ಅಯ್ಯಂಗಾರ್
92.ಹಸುರು ಹೊನ್ನು - ಬಿ.ಜಿ.ಎಲ್. ಸ್ವಾಮಿ
93.ಊರುಕೇರಿ - ಡಾ. ಸಿದ್ದಲಿಂಗಯ್ಯ
94.ಯಂತ್ರಗಳನ್ನು ಕಳಚೋಣ ಬನ್ನಿ - ಪ್ರಸನ್ನ
95.ಅಲೆಮಾರಿಯ ಅಂಡಮಾನ್ ಮತ್ತು ಮಹಾನದಿ ನೈಲ್ - ಕೆ.ಪಿ. ಪೂರ್ಣಚಂದ್ರ ತೇಜಸ್ವಿ
96.ಅರೆ ಶತಮಾನದ ಅಲೆ ಬರಹಗಳು - ಕೆ.ವಿ. ಸುಬ್ಬಣ್ಣ
97.ಶಕ್ತಿಶಾರದೆಯ ಮೇಳ - ಡಾ.ಡಿ.ಆರ್. ನಾಗರಾಜ
98.ಹುಳಿಮಾವಿನ ಮರ - ಪಿ. ಲಂಕೇಶ
99.ವಚನ ಭಾರತ - ಎ.ಆರ್. ಕೃಷ್ಣಶಾಸ್ತ್ರೀ
100.ಹುಚ್ಚು ಮನಸ್ಸಿನ ಹತ್ತು ಮುಖಗಳು - ಶಿವರಾಮ ಕಾರಂತ್.

ಶೇರ್ ಮಾಡಿರುವುದು.

Bank que

ಬಹಳ ವರ್ಷಗಳ ನಂತರ ಇಬ್ಬರು ಗೆಳೆಯರು ಭೇಟಿಯಾದರು....

1st ಫ್ರೆಂಡ್: ಹೇಗೀದ್ದೀಯ ? ಮಕ್ಕಳು ಹೇಗಿದ್ದಾರೆ? ಎಲ್ಲಾ ಎಲ್ಲಿದ್ದಾರೆ?...

2nd ಫ್ರೆಂಡ್: ಹಿರಿಯವನು SBI ಅಲ್ಲಿ ಇದ್ದಾನೆ..
ಅವನ ಹೆಂಡತಿ ICICI ..
ಎರಡನೆಯ ಮಗ HDFC ..
ಅವನ ಹೆಂಡತಿ Canara Bank
ಕಿರಿಯವನು , ಮದುವೆ ಆಗಿಲ್ಲ..Axis Bank ಅಲ್ಲಿ ಇದ್ದಾನೆ...

1st ಫ್ರೆಂಡ್: ಓಹ್..!! ಗ್ರೇಟ್ ..ಹಾಗಿದ್ರೆ..ಎಲ್ಲಾ ಬ್ಯಾಂಕ್ ಜಾಬ್ನಲ್ಲಿ ಸೆಟ್ಲ್ ಆಗಿದ್ದಾರೆ...

2nd ಫ್ರೆಂಡ್: ಇಲ್ಲಪ್ಪಾ... ಅವರೆಲ್ಲಾ ಆ ಬ್ಯಾಂಕ್ ಗಳಲ್ಲಿ 'ಕ್ಯೂ' ನಲ್ಲಿ ನಿಂತಿದ್ದಾರೆ.....!!!!!!

Card card card

🔰   Life is a Visiting Card,
💃   Wife is a Memory Card,
👨   Husband is  A T M  card
👰   girl  fnd is a  Debit  card
🙋   Neighbour is  a  greeting  card
💁   Sister-in-Law  is  a  Recharge  card
👪   Mother  father  is  Pan  card
👦   Brother-in-Law  is  a  " duplicate  CARD "
👫   child  is  a   Identity  card
🚹🚹   But Friends are "AADHAR" Card
Useful for everywhere.

ಜೀವನ (Life)

~~~~~~~~~ಜೀವನ~~~~~~~~

👉 ಮೊದಲ ಬಾರಿಗೆ ಕಣ್ಣರೆಪ್ಪೆ ತೆರೆದರೆ
    ಅದು  ' ಜನನ '
    ಕೊನೆಯ ಬಾರಿಗೆ ಕಣ್ಣರೆಪ್ಪೆ
    ಮುಚ್ಚಿದರೆ  ಅದು  'ಮರಣ '
    ತೆರೆದು ಮುಚ್ಚುವ ನಡುವಣ
    ಕ್ಷಣಗಳೆ  ' ಜೀವನ '

👉 ನಮ್ಮ ಜನನ, ನಮ್ಮ ಆಯ್ಕೆ
    ಅಲ್ಲದ  ಘಟನೆ :
     ನಮ್ಮ ಮರಣ ನಮ್ಮ ಅಧೀನದಲ್ಲಿ
     ಇಲ್ಲದ  ಅಂತ್ಯ. ಆದರೆ~  ನಮ್ಮ
     ಜೀವನ ಮಾತ್ರ ನಾವೇ
     ರೂಪಿಸಿಕೊಳ್ಳಬಹುದಾದ ಒಂದು
     ಪಯಣ

👉 ಜೀವನದಲ್ಲಿ " ಬಾಲ್ಯವೆಂದರೆ
     ಸ್ವಾಗತ  " ಭಾಷಣ"
     ಯೌವ್ವನವೆಂದರೆ ಉಪನ್ಯಾಸ;
     ವೃದ್ಧಾಪ್ಯವೆಂದರೆ 
     ವಂದನಾರ್ಪಣೆ;
     ಸಾವು ಎಂದರೆ ಶಾಂತಿಮಂತ್ರ.
    ~~ ನಿರೂಪಣಾಕಾರರ ಭಾಷೆಯಲ್ಲಿ

👉  ದೇವರು ನಮಗೆ  ಜೀವನವನ್ನಲ್ಲ ,
     ಜೀವವನ್ನಷ್ಟೆ  ಕೊಟ್ಟ .
     ಹೇಗೆ ಜೀವಿಸಬೇಕೆಂಬುದನ್ನು ಅವ 
     ನಮಗೆ ಬಿಟ್ಟುಕೊಟ್ಟ.

👉  ನೀರು ನಿಂತರೆ, ಕೊಳೆತು
      ನಾರುತ್ತದೆ.  ಹರಿದು ಹೋದರೆ
      ತೊಳೆದು  ತಿಳಿಯಾಗುತ್ತದೆ .
     ನಮ್ಮ ಜೀವನ ನಿಂತ
     ನೀರಾಗಬಾರದು;
     ಅದು ಹರಿಯುವ
      ಹೊಳೆಯಾಗಬೇಕು!

👉 ಜೀವನದಲ್ಲಿ ಕಷ್ಟಗಳು ನಮ್ಮನ್ನು  
    ನಾಶಗೊಳಿಸಲು ಬರೋದಿಲ್ಲ.
    ಬದಲಾಗಿ
    ನಮ್ಮನ್ನು ಇನ್ನಷ್ಟು
    ಬಲಿಷ್ಟವಾಗಿಸಲು   ಬರುತ್ತಿರುತ್ತದೆ !

👉 ಜೀವನವೆಂಬ ಬಯಲಾಟದಲ್ಲಿ
     ಬಿದ್ದವ ಬಿದ್ದ.
         ಎದ್ದವ ಎದ್ದ.
      ಬಿದ್ದೂ ಏಳದವ
     ನೆಗೆದು ಬಿದ್ದ.

👉  ಅಲೆಗಳೇ ಇಲ್ಲದ ಶಾಂತ
     ಸಮುದ್ರ.   ಸಮರ್ಥ
     ಈಜುಗಾರನನ್ನು  ಸೃಷ್ಟಿಸಲಾರದು. 
     ಅಂತೆಯೇ   ಏಳುಬೀಳುಗಳಿಲ್ಲದ
     ಜೀವನ,  ಸಶಕ್ತ, ಸಮರ್ಥ
     ವ್ಯಕ್ತಿಯನ್ನೆಂದೂ ನಿರ್ಮಿಸಲಾರದು .

👉. ಜೀವನವೆಂಬುದು ಒಂದು
     ಪುಸ್ತಕವಿದ್ದಂತೆ
     ಮೊದಲ ಪುಟ ಜನನವಾದರೆ ,
     ಕೊನೆಯ  ಪುಟ ಮರಣ .
     ಇವೆರಡನ್ನು  ಹೊರತುಪಡಿಸಿ,
     ನಡುವಿನ   ಹಾಳೆಗಳನ್ನು 
     ನಾವೇ ಬರೆದು 
     ತುಂಬಿಕೊಳ್ಳಬೇಕಾಗುತ್ತದೆ
    
👉  ಜೇಬು ಖಾಲಿಯಾದಾಗ,
     ಎದುರಾಗುವ 
     ಒಂದೊಂದು ತಿರುವು ಕೂಡಾ
     ಒಂದೊಂದು ಪಾಠವನ್ನು
     ಹೇಳಿಕೊಡುತ್ತದೆ .
           ಆದರೆ
     ಜೇಬು ತುಂಬಿದಾಗ 
     ಎದುರಾಗುವ  ಪ್ರತಿಯೊಂದು 
     ತಿರುವು ಕೂಡಾ
     ನಮ್ಮನ್ನು ದಾರಿ
     ತಪ್ಪುವಂತೆ ಮಾಡುತ್ತದೆ.

💐💐💐 ಶುಭೋದಯ💐💐💐

ಎನ್ ಎಸ್ ಎಸ್

ಸಂಘ ದೇಶಕ್ಕೆ ಏನು ನೀಡಿದೆ?

ಸೇವೆ ಹಾಗೂ ನಿಸ್ವಾರ್ಥತೆಗೆ ಉತ್ತಮ ಉದಾಹರಣೆಯೆಂದರೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ. ಇದರ ಸ್ಥಾಪನೆಯಾಗಿದ್ದು ೧೯೨೫ರಲ್ಲಿ. ಸಂಘಸಂಸ್ಥಾಪಕರು ಡಾ.ಕೇಶವ ಬಲಿರಾಮ ಹೆಡಗೆವಾರ್. ವಿಶ್ವದ ಅತಿದೊಡ್ಡ ಸಂಘಟನೆಯೆಂಬ ಹೆಗ್ಗಳಿಕೆ ಸಂಘದ್ದು. ಅನೇಕ ಆರೋಪ, ಅವಮಾನಗಳನ್ನು ಎದುರಿಸಿದರೂ “ನಮಸ್ತೇ ಸದಾ ವತ್ಸಲೇ ಮಾತೃಭೂಮೇ” ಎಂಬ ರಾಷ್ಟ್ರಸೇವೆಯ ಪರಿಕಲ್ಪನೆಯಲ್ಲಿ ಮಾತೃಭೂಮಿಯನ್ನು ಗೌರವಿಸುತ್ತಾ, ದೇಶಪ್ರೇಮವನ್ನು ಜನಸಾಮಾನ್ಯರಲ್ಲಿ ತುಂಬುತ್ತ, ಕಣಕಣದಲ್ಲಿ ಸೇವೆ ಹಾಗೂ ನಿಸ್ವಾರ್ಥತೆಯ ಗುಣಗಳನ್ನು ಅಳವಡಿಸಿಕೊಂಡು, ಸಮಗ್ರ ಭಾರತದ ಏಕತೆಗೆ ಶ್ರಮಿಸುತ್ತಿರುವ ಏಕೈಕ ಸಂಘಟನೆಯೆಂದರೆ ಅದು ರಾಷ್ಟ್ರೀಯ ಸ್ವಯಂ ಸೇವಕ ಸಂಘ. ದೇಶಕ್ಕೆ ಸಂಘ ನೀಡಿದ ಕೊಡುಗೆಯೇನು..? ಎಂಬುದು ಹಲವು ಸ್ವಘೋಷಿತ ವಿಚಾರವಾದಿಗಳ, ಬುದ್ಧಿಜೀವಿಗಳ ಪ್ರಶ್ನೆಯಾಗಿರಬಹುದು. ದೇಶಕ್ಕೆ ಸಂಘ ನೀಡಿದ ಕೊಡುಗೆಯೇನೆಂಬುದನ್ನು ಒಂದು ಚಿಕ್ಕ ಲೇಖನದಲ್ಲಿ ಹೇಳಲು ಸಾಧ್ಯವಿಲ್ಲ. ಆದರೂ ಸಂಶೋಧನೆಯಲ್ಲೇ ಸದಾ ಕಾಲಕಳೆಯುವ ವಿಚಾರವಾದಿಗಳಿಗೆ ಸಮಯಾಭಾವವಿರುವುದರಿಂದ (?) ಈ ಚಿಕ್ಕ ಲೇಖನ..!! ಸಂಘದ ಬಗ್ಗೆ ಇಷ್ಟನ್ನಾದರೂ ಒದಿಕೊಳ್ಳಿ..!!

ಅಕ್ಟೋಬರ್ ೧೯೪೭ರಂದು ಕಾಶ್ಮೀರಸೀಮೆಯನ್ನು ಕಾಯುತ್ತಾ, ಪಾಕಿಸ್ತಾನದ ಚಲನವಲನಗಳನ್ನು ನಿರೀಕ್ಷಿಸುತ್ತಾ, ಪಾಕಿಸ್ತಾನದ ಸೇನಾ ತುಕುಡಿಗಳು ಕಾಶ್ಮೀರವನ್ನು ಪ್ರವೇಶಿಸಿದಂತೇ ತಡೆದವರು ಇದೇ ಸ್ವಯಂ ಸೇವಕರು..!! ಅಂದು  ಮಾತೃಭೂಮಿಯ ರಕ್ಷಣೆಗಾಗಿ ಹಲವು ಸ್ವಯಂ ಸೇವಕರು ಪ್ರಾಣವನ್ನೇ ತ್ಯಜಿಸಿದರು. ಭಾರತ ವಿಭಜನೆಯ ನಂತರ ದೇಶದಲ್ಲಿ ಹಲವಾರು ದಂಗೆಗಳಾದವು. ಅವುಗಳನ್ನು ನಿಯಂತ್ರಿಸಲು ನೆಹರೂ ಸರ್ಕಾರ ಅಸಮರ್ಥವಾಗಿತ್ತು. ಪಾಕಿಸ್ತಾನದಿಂದ ಪ್ರಾಣವನ್ನು ಉಳಿಸಿಕೊಂಡು ಬಂದ ಹಲವಾರು ಜನರಿಗೆ ರಕ್ಷಣೆ ನೀಡಲು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸುಮಾರು ೩೦೦೦ಕ್ಕಿಂತಲೂ ಹೆಚ್ಚಿನ ಶಿಬಿರಗಳನ್ನು ಗಡಿಯಲ್ಲಿ ಸ್ಥಾಪಿಸಿತ್ತು.

೧೯೬೨ರ ಯುದ್ಧದಲ್ಲಿ ಪ್ರಮುಖ ಪಾತ್ರವಹಿಸಿದ್ದು ಇದೇ ರಾಷ್ಟೀಯ ಸ್ವಯಂ ಸೇವಕ ಸಂಘ. ದೇಶದ ಮೂಲೆಮೂಲೆಗಳಿಂದ  ಬಂದ ಸ್ವಯಂಸೇವಕರು ಗಡಿಯಲ್ಲಿ ಜಮಾಯಿಸಿ, ಭಾರತೀಯ ಸೈನಿಕರ ಸಹಾಯಕ್ಕೆ ನಿಂತರು. ಈ ಯೋಗದಾನವನ್ನರಿತ ನೆಹರೂ ೧೯೬೩ರ ಜನವರಿ ೨೬ರ ಪರೇಡಿಗೆ ಸ್ವಯಂಸೇವಕರನ್ನು ಆಹ್ವಾನಿಸಿದರು. ಪರೇಡಿನಲ್ಲಿ ಭಾಗವಹಿಸುವ ತಂಡಗಳು ಇಂದಿಗೂ ಹಲವು ದಿನಗಳ ಕಾಲ ಅಭ್ಯಾಸ ನಡೆಸಬೇಕಾಗುತ್ತದೆ. ಆದರೆ ಎರಡು ದಿನ ಮುಂಚಿತವಾಗಿ ಆಹ್ವಾನವನ್ನು ಸ್ವೀಕರಿಸಿದರೂ ಸುಮಾರು ೩೫೦೦ ಸ್ವಯಂಸೇವಕರು ಗಣವೇಶದಲ್ಲಿ ಪರೇಡಿನಲ್ಲಿ ಭಾಗಿಯಾಗಿ ರಾಷ್ಟ್ರೀಯ ಸ್ವಯಂ ಸೇವಕಸಂಘದ  ಶಿಸ್ತನ್ನು ಪ್ರದರ್ಶಿಸಿದರು.

ಕಾಶ್ಮೀರವನ್ನು ಭಾರತ ಗಣರಾಜ್ಯದಲ್ಲಿ ವಿಲೀನಗೊಳಿಸುವ ಸಂದರ್ಭದಲ್ಲೂ ಸಂಘದ ಪಾತ್ರ ಹಿರಿದು. ಕಾಶ್ಮೀರದ ರಾಜ ಹರಿಸಿಂಹ ಕಾಶ್ಮೀರವನ್ನು ವಿಲೀನಗೊಳಿಸುವ ಬಗ್ಗೆ ಯಾವ ನಿರ್ಧಾರವನ್ನೂ ಕೈಗೊಂಡಿರಲಿಲ್ಲ. ಅತ್ತ ಪಾಕಿಸ್ತಾನ ಗಡಿಯೊಳಗೆ ಅಧಿಪತ್ಯ ಸ್ಥಾಪಿಸುವ ಹುನ್ನಾರ ನಡೆಸುತ್ತಿತ್ತು. ನೆಹರೂ ಸರ್ಕಾರ ತಟಸ್ಥ ನೀತಿಯನ್ನು ಅನುಸರಿಸಿತ್ತು. ಆಗ ಸರ್ದಾರ್ ವಲ್ಲಭಬಾಯಿ ಪಟೇಲ್ ಗುರೂಜಿ ಗೊಳ್ವಲ್ಕರ್  ಬಳಿ ಈ ವಿಷಯವನ್ನು ಪ್ರಸ್ತಾಪಿಸಿದರು. ಗೊಳ್ವಲ್ಕರರು ಶ್ರೀನಗರಕ್ಕೆ ಧಾವಿಸಿ ರಾಜ ಹರಿಸಿಂಹನನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಆಮೇಲೆ ರಾಜ ಹರಿಸಿಂಹ ಕಾಶ್ಮೀರವನ್ನು ಭಾರತಗಣತಂತ್ರದಲ್ಲಿ ವಿಲೀನಗೊಳಿಸುವ ಪ್ರಕ್ರಿಯೆಯನ್ನು ಆರಂಭಿಸಿದರು.

೧೯೬೫ರ ಯುದ್ಧದಲ್ಲೂ ಸಂಘ ಮಹತ್ವದ ಭೂಮಿಕೆಯನ್ನು ನಿಭಾಯಿಸಿತ್ತು. ಅಂದಿನ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರೀಜಿ ಕಾನೂನು ಸುವ್ಯವಸ್ಥೆಗಾಗಿ ಸ್ವಯಂ ಸೇವಕರನ್ನು ಆಹ್ವಾನಿಸಿದ್ದರು. ಕಾನೂನು ಸುವ್ಯವಸ್ಥೆಯನ್ನು ಸ್ವಯಂ ಸೇವಕರು ಪಾಲಿಸಿದರೆ ಪೋಲಿಸರು ಸೈನ್ಯದೊಂದಿಗೆ ಗಡಿಯಲ್ಲಿ ಹೊರಾಡಿದರು. ಯುದ್ಧದಲ್ಲಿ ಗಾಯಾಳುಗಳಾದ  ಸೈನಿಕರಿಗೆ ರಕ್ತದಾನ ಮಾಡಿದ್ದು ಸ್ವಯಂಸೇವಕರೇ..!!

ದಾದ್ರಾ, ನಗರ ಹವೇಲಿ, ಗೋವಾ ಮುಂತಾದ  ರಾಜ್ಯಗಳನ್ನು ಭಾರತಗಣತಂತ್ರದೊಂದಿಗೆ ವಿಲೀನಗೊಳಿಸಿದ ಕೀರ್ತಿ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೇ ಸಲ್ಲುತ್ತದೆ. ೨೧ ಜುಲೈ ೧೯೫೪ ಪೋರ್ಚುಗೀಸರಿಂದ ದಾದ್ರಾ, ೨೮ ಜುಲೈ ೧೯೫೪ ರಂದು ನರೋಲಿಗಳನ್ನು ವಿದೇಶಿಯರ  ಆಳ್ವಿಕೆಯಿಂದ ಮುಕ್ತಗೊಳಿಸಲಾಯಿತು. ೨ ಅಗಸ್ಟ್ ೧೯೫೪ರಂದು ಪೋರ್ಚುಗಲ್ಲಿನ ಧ್ವಜವನ್ನು ಕಿತ್ತೆಸೆದು ತ್ರಿವರ್ಣಧ್ವಜವನ್ನು ಹಾರಿಸಿದ ಕೀರ್ತಿ ಸ್ವಯಂ ಸೇವಕರಿಗೇ ಸಲ್ಲುತ್ತದೆ. ಸಂಪೂರ್ಣ ದಾದ್ರಾ. ನಗರ ಹವೇಲಿ ಪ್ರಾಂತ್ಯಗಳನ್ನು ಪೋರ್ಚುಗೀಸರ ಆಡಳಿತದಿಂದ ತಪ್ಪಿಸಿ ಭಾರತ ಸರ್ಕಾರಕ್ಕೊಪ್ಪಿಸಿದ ಯಶಸ್ಸು ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ಸಲ್ಲುತ್ತದೆ. ಗೋವಾ ಪ್ರಾಂತ್ಯದ ವಿಲೀನ ಸಂದರ್ಭದಲ್ಲೂ ನೆಹರೂ ಸರ್ಕಾರ ಯಾವುದೇ ತೀರ್ಮಾನ ಕೈಗೊಂಡಿರಲಿಲ್ಲ. ಅಂತಹ ಸಂದರ್ಭದಲ್ಲಿ ಶ್ರೀ ಜಗನ್ನಾಥ ರಾವ್ ಜೋಶಿಯವರ ಮುಂದಾಳತ್ವದಲ್ಲಿ ಸ್ವಯಂಸೇವಕರು ಆಂದೋಲನವನ್ನು ಪ್ರಾರಂಭಿಸಿದರು. ಸ್ವಯಂ ಸೇವಕರು ಕಠಿಣ ಶಿಕ್ಷೆಗೊಳಗಾದರೂ ಆಂದೋಲನವನ್ನು ಕೈಬಿಡಲಿಲ್ಲ. ಸ್ವಯಂಸೇವಕರ  ಸತತ ಪರಿಶ್ರಮದಿಂದ ೧೯೬೧ರಲ್ಲಿ ಗೋವಾ ಭಾರತಗಣತಂತ್ರದೊಂದಿಗೆ ವಿಲೀನವಾಯಿತು.

೧೯೭೫ ರಿಂದ ೧೯೭೭ರ ತುರ್ತುಪರಿಸ್ಥಿತಿಯ ಸಂದರ್ಭದಲ್ಲೂ ಸಂಘದ ಸಾಧನೆ ಹಿರಿದು. ತುರ್ತುಪರಿಸ್ಥಿತಿಯ ವಿರುದ್ಧ ಸಂಘದ ಸತ್ಯಾಗ್ರಹ ಆರಂಭಗೊಂಡಿತ್ತು. ಹಲವಾರು ಸ್ವಯಂಸೇವಕರನ್ನು ಜೈಲಿಗೆ ತಳ್ಳಲಾಗಿತ್ತು. ಆದರೂ ತೆರೆಮರೆಯ ಹಿಂದೆಯೇ ಸಂಘದ ಕಾರ್ಯಗಳು ನಡೆಯುತ್ತಿದ್ದವು. ತುರ್ತುಪರಿಸ್ಥಿತಿಯ ವಿರುದ್ಧ ಜನರನ್ನು ಜಾಗೃತಿಗೊಳಿಸುವ ಕಾರ್ಯಕ್ರಮಗಳನ್ನು ನಡೆಸಲಾಯಿತು. ಜೈಲಿನಲ್ಲಿರುವ ಹಲವು ನಾಯಕರನ್ನು ಕೂಡಿಸಿ ಪರ್ಯಾಯ ಪಕ್ಷರಚನೆಗೆ ಸ್ವಯಂಸೇವಕ ಸಂಘ ಮುಂದಾಯಿತು.

೧೯೭೧ರ ಒರಿಸ್ಸಾ ಚಂಡಮಾರುತ, ಭೋಪಾಲ್ ಗ್ಯಾಸ್ ದುರಂತ,೧೯೮೪ರ ಸಿಖ್ ವಿರೋಧಿ ದಂಗೆ, ಗುಜರಾತಿನಲ್ಲಿ ಸಂಭವಿಸಿದ ಭೂಕಂಪ, ಸುನಾಮಿ, ಉತ್ತರಾಖಂಡದ ಪ್ರವಾಹ, ಕಾರ್ಗಿಲ್ ಯುದ್ಧ, ಚೆನ್ನೈ ಪ್ರವಾಹ ಮುಂತಾದ ರಾಷ್ಟ್ರೀಯ ವಿಪತ್ತಿನ ಸಂದರ್ಭಗಳಲ್ಲಿ ಸಂಘ ತನ್ನ ನಿಸ್ವಾರ್ಥಸೇವೆಯನ್ನು ಸಲ್ಲಿಸಿದೆ. ಕೇವಲ ಭಾರತದಲ್ಲಷ್ಟೇ ಅಲ್ಲ, ನೇಪಾಳ, ಶ್ರೀಲಂಕಾ, ಸುಮಾತ್ರಾ ಮುಂತಾದ ವಿದೇಶಗಳ ತುರ್ತುಪರಿಸ್ಥಿತಿಯಲ್ಲೂ ಸಂಘ ಪರಿಹಾರಕಾರ್ಯವನ್ನು ನಡೆಸಿದೆ. ಇಂದು ದೇಶದಲ್ಲಿ ಯಾವುದೇ ವಿಪತ್ತು ಸಂಭವಿಸಿದರೂ ಸಂಘ ಸಂತ್ರಸ್ತರ ನೆರವಿಗೆ ಧಾವಿಸುತ್ತದೆ. ಉಚಿತ ಆಹಾರ, ವಸತಿಗಳ ಸೇವೆಯನ್ನು ಆರಂಭಿಸುತ್ತದೆ. ಸ್ವಯಂಸೇವಕರು ಹಗಲಿರುಳೆನ್ನದೇ ಪ್ರಾಣವನ್ನು ಪಣಕ್ಕಿಟ್ಟು ಸಂತ್ರಸ್ತರನ್ನು ರಕ್ಷಿಸುವ ಕಾರ್ಯಕ್ಕೆ ಮುಂದಾಗುತ್ತಾರೆ.

ಇವು ಕೇವಲ ಉದಾಹರಣೆಗಳು. ದೇಶಕ್ಕಾಗಿ ಸಂಘ ನೀಡಿದ ಕೊಡುಗೆಯೇನು..? ಇದು ಪ್ರತಿಯೊಂದು ದೇಶಪ್ರೇಮಿಗೂ ಗೊತ್ತಿರುವ ವಿಷಯ. ದೇಶದ ಇತಿಹಾಸದ ಬಗ್ಗೆ ಅರಿವಿರುವ ಯಾರೂ ಸಂಘದ ವಿರುದ್ಧ ಮಾತಾಡುವುದಿಲ್ಲ. ಆದರೆಂದೂ ಸಂಘ ತನ್ನ ಸಾಧನೆಯನ್ನು ಹೇಳಿಕೊಂಡು ಮೈಮರೆತಿಲ್ಲ. ರಾಜಕೀಯ ಲಾಭಕ್ಕಾಗೂ ಬಳಸಿಕೊಂಡಿಲ್ಲ. ಮಾತೃಭೂಮಿಯ ಸೇವೆಯೇ ಸಂಘದ ನಿಜವಾದ ಉದ್ದೇಶ.