Snap Deal Search

ಸಾಲ

ಸಾಲ
  
           ಮಾಡಿಕೊಂಡೆನಪ್ಪ ಸಾಲವನ್ನು , ತೀರಿಸಲಸಾಧ್ಯವಾಗಿದೆ ಇಂದು !
ತಿಳಿದು, ತಿಳಿಯದೋ ಮಾಡಿಕೊಂಡೆ ಸಾಲವೆಂಬ ಮದುವೆಯನ್ನು!

ತಿಂಗಳಿಗೊಮ್ಮೆ ಜನ್ಮ ಕೊಡುತ್ತಿರುವೆ ಬಡ್ಡಿಯೆಂಬ ಮಕ್ಕಳನ್ನು!
ಹೇಗಯ್ಯ ನಡೆಸಲಿ ಈ ಸಾಲವೆಂಬ ಸಂಸಾರವನ್ನು !

ಇದರಂತ್ಯ ಎಂದಿದಿಯೋ ತಿಳಿಯದಾಗಿದೆ ಒಂದೂ!
ಇನ್ನೆಷ್ಟು ಸಂಕಟವ ಪಡಬೇಕಯ್ಯ ಮುಂದು!

ಒಬ್ಬರ ನಂತರ ಒಬ್ಬರು ಬರುತಿಹರಯ್ಯ ಮನೆಗೆ ಸಾಲ ಕೊಟ್ಟವರು !
ಅವರಿಗೆಷ್ಟು ಸಮಾಧಾನ ಮಾಡಲಿ ನಾನು!
ಕೇಳುವವರಿಲ್ಲ ಯಾರೂ ನನ್ನ ಗೋಳು!

ಅಜ್ಞಾನದಿಂದ ಮಾಡಿರುವ ಈ ಸಾಲವು ಮೊದಮೊದಲು ಹಿತಕೊಟ್ಟು, ಹಿಂಡುತಿದೆ ಇಂದು ಪ್ರಾಣವನ್ನು!
ಇದರಿಂದ ಪಾರಗಲು ಇಹುದೇನಾದರು ದಾರಿಯ?

ದುಡಿಯುತ್ತಿರುವೆ ಸಾಲವ ತೀರಿಸಲು!
ಆದರೂ, ತಡೆದುಕೊಳ್ಳಲಾಗುತ್ತಿಲ್ಲ ಈ ಸಾಲದ ಭಾದೆ!
ಕಾಣದಂತಾಯಿತು ಸಂತೋಷವ ಈ ಬದುಕಿನೊಳಗೆ !

ಚಿಂತೆ ಹೆಚ್ಚಾಯಿತು, ಮನಸ್ಸು ಕಂಗಾಲಾಯಿತು!
ಎದೆ ಬಡಿತ ಹೆಚ್ಚುತ್ತ ದುಗುಡ ಉದ್ಭವಿಸಿತು!

ಊಟಮಾಡಲಾಗುತ್ತಿಲ್ಲ, ಎದ್ದೇಳಲಾಗುತ್ತಿಲ್ಲ!
ಕಾಲು ಮುರಿದ ಕೋಳಿಯಂತೆ ಬಿದ್ದಿರುವೆ ಮೂಲೆಯಲ್ಲಿ !
ಆದೆ ನಾನು ನಿಶ್ಯಕ್ತನಾದೆ! ಆದೆ ನಾನು ನಿಶ್ಯಕ್ತನಾದೆ!!!

ಸಂಕಟ ಬಂದಾಗ ವೆಂಕಟರಮಣ, ಮೆಚ್ಚುವನೇ ದೇವರು ಇದನ!
ಛೆ! ಛೆ! ಬರುಡು ಭೂಮಿಯಂತಾದೆ ಬಾಳಿನೊಳು!

ಯಾರೂಯಿಲ್ಲ ಸಹಾಯಕ್ಕೆಂದು , ಮಾಡಿದ್ದುಣ್ಣೋ ಮಾರಾಯ! ಎಂಬುದರಿವಾಗಿದೆ ಇಂದು , ಮುದುಕನಿಗಿರುವ ಕೋಲಾಸರೆಯು ಎನಗಿಲ್ಲ ಇಂದು !

ಹೆಂಡತಿ ದೂರಾದಾಗ ಆಗಲಿಲ್ಲ ಈ ನೋವು !
ಮಕ್ಕಳು ದೂರಿದಾಗ ಆಗಲಿಲ್ಲ ಈ ಸಂಟ !
ಅವಮಾನವಾದಾಗ ಆಗಲಿಲ್ಲ ಈ ಪರಿಯ ಭಾದೆ !

ಬದುಕಿ ಸತ್ತಂತೆ ಇರುವುದಕ್ಕಿಂತ ,
ಕೊನೆಯುಸಿರೆಳೆಯುವುದೇ ಲೇಸು ಎಂದೆನಿಸುತ್ತಿದೆ!
ಆದರೆ, ಸಾವೇ ಎಲ್ಲದಕ್ಕೂ ಪರಿಹಾರವಲ್ಲ
ಎಂದು ತಿಳಿದಿತ್ತು ಎಂದೋ!

ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಸಾಗುತಿದೆ ಬಾಳು!

ಮರುಜನ್ಮ ಬೇಡವೆನ್ನುವುದೇಕೆ?

ಎಚ್ಚೆತ್ತುಕೊಂಡು ನೋಡಿದರೆ, ಜೀವನದಲ್ಲಿ ಬಹಳ ದುಃಖವನ್ನು ಕಾಣಬಹುದು. ಜೀವನದಲ್ಲಿ ದುಃಖವಿದೆ ಮತ್ತು ದುಃಖವೆಂದರೆ ನಿಮಗೆ ಇಷ್ಟವಾಗದೆ ಇರುವುದು, ಬೇಡದೆ ಇರುವುದು. ನಾವು ಯಾವುದನ್ನು ಹೊಂದಲು ಬಯಸುವುದಿಲ್ಲವೊ, ಅದೇ ದುಃಖ ಮತ್ತು ಅದು ಇದೆ. ಪತಿ-ಪತ್ನಿಯ ನಡುವೆ, ತಂದೆ-ಮಗಳ ನಡುವೆ, ತಾಯಿ- ಮಗನ ನಡುವೆ, ಸಹೋದರ-ಸಹೋದರಿಯರ ನಡುವೆ, ಸ್ನೇಹಿತರ ನಡುವೆ ದುಃಖವಿದೆ. ಶತ್ರುಗಳಿಂದ ದುಃಖವಿದೆ. ನೀವೇನೇ ಮಾಡಿದರೂ ದುಃಖವಿರುತ್ತದೆ. ನಿಮ್ಮ ದೇಹ ಎಲ್ಲದಕ್ಕಿಂತಲೂ ಹೆಚ್ಚು ದುಃಖವನ್ನು ಕೊಡುತ್ತದೆ. ಜಗತ್ತಿನಲ್ಲಿ ಜನಿಸಿ ದಾಗ ಮಗುವಾಗಿ ಇತರರ ಮೇಲೆ ಅವಲಂಬಿಗಳಾಗಿ ದ್ದಿರಿ. ನಿಮ್ಮಿಂದ ಏಳಲೂ ಆಗುತ್ತಿರ ಲಿಲ್ಲ. ನಿಮ್ಮನ್ನು ಯಾರೋ ಮೇಲಕ್ಕೆತ್ತಬೇಕಾ ಯಿತು. ಯಾರೋ ನಿಮ್ಮನ್ನು ಒರೆಸಬೇಕಾಯಿತು. ಹುಟ್ಟಿದ ಕ್ಷಣದಿಂದ ನೀವು ಅವಲಂಬಿಗಳು. ವಯಸ್ಸಾದ ಮೇಲೂ ಅವಲಂಬಿಗಳಾಗು ತ್ತೀರಿ. ಆದರೆ ಹಣದಿಂದ ನೀವು ಸ್ವತಂತ್ರರು ಎಂಬ ತಪ್ಪಾದ ಅಭಿಪ್ರಾಯ ಬರು ತ್ತದೆ. ಆದ್ದರಿಂದಲೇ ಅದನ್ನು ಮಾಯೆ ಎಂದು ಕರೆಯು ವುದು. ಮಾಯೆ ಎಂದರೆ, ಇತರರಿಗೆ ಕೆಲವು ರೂಪಾಯಿ ಗಳನ್ನು ನೀವು ಕೊಟ್ಟಾಗ, ನೀವು ಸ್ವತಂತ್ರರಾಗಿರುವಿರಿ ಎಂಬ ಭಾವನೆಯನ್ನು ಹೊಂದುವುದು. ಜೀವನದಲ್ಲಿ ಅವಲಂಬನೆ ಇದೆ. ಅವಲಂಬನೆ ಇದ್ದಾಗ ದುಃಖವಿರುತ್ತದೆ. ಯಾವುದು ದುಃಖವೊ ಅದರಿಂದ ನಿಮಗೆ ಹಿತವುಂಟಾಗುವುದಿಲ್ಲ. ಆದ್ದರಿಂದ ಅದನ್ನು ಹೊಂದಲು ನೀವು ಬಯಸುವುದಿಲ್ಲ. ಆದ್ದರಿಂದ ಜನರು ಇನ್ನು ಮುಂದೆ ಮರುಜನ್ಮ ಬೇಡ ಎಂದರು. ಎಲ್ಲವೂ ಸಾಕುಸಾಕಾಗಿದೆ ಎಂದರು. 

ಸ್ವಲ್ಪ ಊಹಿಸಿ. ಮತ್ತೊಮ್ಮೆ ಶಾಲೆಗೆ ಹೋಗಬೇಕು, ಎರಡೇಟನ್ನು ತಿನ್ನಬೇಕು. ನಂತರ ಕಾಲೇಜಿಗೆ ಹೋಗಿ, ಹದಿಹರೆಯದ ಸಮಸ್ಯೆಗಳನ್ನೆಲ್ಲಾ ಎದುರಿಸಬೇಕು. ಹದಿಹರೆಯದವರ ಮುಖಗಳನ್ನು ನೋಡಿದರೆ ಅವು ಊದಿಕೊಂಡಿರುತ್ತವೆ, ಬಹಳ ಕೋಪದಿಂದ ಇರುತ್ತಾರೆ. ಹೆತ್ತವರ ಮೇಲೆ ಕೋಪ. ಏನು ಮಾಡಬೇಕೆಂದೇ ಅವರಿಗೆ ತಿಳಿದಿರುವುದಿಲ್ಲ. ನಮ್ಮನ್ನು ಕಾಡುವವರು ಕೇವಲ ಶತ್ರುಗಳಲ್ಲ; ನಮ್ಮನ್ನು ಹೆಚ್ಚಾಗಿ ಕಾಡುವವರೆಂದರೆ ನಮ್ಮ ಮಿತ್ರರು. ಎಲ್ಲವೂ ಒಂದು ಸಮಸ್ಯೆಯೆ. ಶತ್ರುಗಳು ನಿಮ್ಮ ಮನಸ್ಸನ್ನು ಹೇಗೆ ಆವರಿಸಿಕೊಂಡಿರುತ್ತಾರೋ, ಹಾಗೆಯೇ ಮಿತ್ರರೂ ನಿಮ್ಮ ಮನಸ್ಸನ್ನು ಆವರಿಸಿಕೊಳ್ಳುತ್ತಾರೆ. ಇವೆಲ್ಲಾ ಸಮಸ್ಯೆಗಳು ಒಂದೆಡೆಯಾದರೆ, ನಿಮಗೆ ಮತ್ತೊಂದು ಕಡೆ ಸಮಸ್ಯೆಯನ್ನು ಉಂಟುಮಾಡುವ ವಿಷಯವೆಂದರೆ ನಿಮ್ಮದೇ ಮನಸ್ಸು. ನಿಮ್ಮ ಮನಸ್ಸು ನಿಮ್ಮನ್ನು ಕಾಡುವಷ್ಟು ಈ ಜಗತ್ತಿನ ಬೇರೆ ಯಾವುದೂ ನಿಮ್ಮನ್ನು ಕಾಡಲಾ ರದು. ಇತರರು ನಿಮ್ಮನ್ನು ಕಾಡುತ್ತಿರುವಂತೆ ತೋರುತ್ತದೆಯಾದರೂ ವಾಸ್ತವದಲ್ಲಿ ನಿಮ್ಮನ್ನು ಕಾಡುತ್ತಿರುವುದು ನಿಮ್ಮದೇ ಮನಸ್ಸು. ಆದ್ದರಿಂದ ನಿಮ್ಮ ಮನಸ್ಸಿನಿಂದ ಮುಕ್ತಿ ಯನ್ನು ಬಯಸುತ್ತೀರಿ. ಆಗ, ''ಇನ್ನೊಂದು ಜನ್ಮ ಬೇಡಪ್ಪ!,'' ಎನ್ನುತ್ತೀರಿ. ಆದರೆ ಕಾಡುತ್ತಿರು ವುದು ನಿಮ್ಮದೇ ಮನಸ್ಸು ಎಂದು ಕಂಡುಕೊಂಡಾಗ, ನಿಮ್ಮನ್ನು ಕಾಡುತ್ತಿರು ವುದು ಇತರರಲ್ಲಿ ಎಂದು ಅರಿತುಕೊಂಡಾಗ, ಅದೇ ಜ್ಞಾನ. ಜ್ಞಾನವಿದ್ದಾಗ, ''ಮತ್ತೆ ನೂರು ಸಲ, ಸಾವಿರ ಸಲ ಜನ್ಮ ಪಡೆದು ಬಂದರೂ ಏನಂತೆ?,'' ಎನ್ನುತ್ತೀರಿ. ಜ್ಞಾನ ದಲ್ಲಿದ್ದಾಗ ಜೀವನವೆಂದರೆ ಸಂತೋಷ, ಆನಂದ ಎಂದು ಅರಿತುಕೊಳ್ಳುತ್ತೀರಿ. 

ನಮ್ಮ ಮನಸ್ಸೇ ನಮ್ಮ ಆಪ್ತಮಿತ್ರ, ನಮ್ಮ ಮನಸ್ಸೇ ನಮ್ಮ ಶತ್ರು, ಅತಿ ನಿಕಷ್ಟವಾದ ಶತ್ರು. ಮಿತ್ರನಲ್ಲ ಮನಸ್ಸು ಶತ್ರುವನ್ನು ಕಾಣಬಹುದು ಮತ್ತು ಶತ್ರುವಲ್ಲೂ ಮಿತ್ರನನ್ನು ಕಾಣಬಹುದು. ಮನಸ್ಸು ವಿಷಯಗಳನ್ನು ತಿರುಚಿ, ವಿಕತಗೊಳಿಸಿ ತನ್ನದೇ ನರಕವನ್ನು ಸಷ್ಟಿಸಬಲ್ಲದು. ತನ್ನದೇ ಸ್ವರ್ಗವನ್ನೂ ಸಷ್ಟಿಸಬಲ್ಲದು. ಇಂತಹ ಮನಸ್ಸಿನಿಂದ ಸ್ವಾತಂತ್ರ್ಯವನ್ನು ಬಯಸುತ್ತೇವೆ. ಮರುಜನ್ಮ ಬೇಡ ಎನ್ನುತ್ತೇವೆ. 

ಈ ಜಗತ್ತೆಲ್ಲವೂ ಶಕ್ತಿಮಯ

ಧ್ಯಾನಯೋಗವೆ ಶಾಂತಿಯ ಸುಗಮ ಸಾಧನ. ದೇವನ ಸುಂದರ ರೂಪ, ಲಕ್ಷಣಗಳನ್ನು ಆಧರಿಸಿ ಮಾಡುವುದೆ ವೈಚಾರಿಕ ಧ್ಯಾನವಾಗಿದೆ. ಪರಮೇಶ್ವರನು ಪ್ರಭುವು, ತ್ರಿಲೋಚನನು, ನೀಲಕಂಠನು, ಪ್ರಶಾಂತನು, ಶಕ್ತಿಸಮೇತನೂ ಆಗಿರುತ್ತಾನೆ. ಇಂಥ ಪರಮಾತ್ಮನ ಧ್ಯಾನಮಾಡಿದ ಮುನಿಯು ಜಗತ್‌ಸಾಕ್ಷಿಯು, ಚರಾಚರ ಜನಕನೂ ಆಗಿರುವ ಜಗದೀಶನಲ್ಲಿ ಬೆರೆತು ಒಂದಾಗಿ ಸಮರಸಾನಂದವನ್ನು ಪಡೆಯುತ್ತಾನೆ. ಉಮಾ ಎಂದರೆ ಪಾರ್ವತಿ ಅಥವಾ ಶಕ್ತಿ. ಶಿವನು ಶಕ್ತಿಸಹಿತನಾಗಿದ್ದಾನೆ. ಶಕ್ತಿ ಇಲ್ಲದೆ ಯಾವುದೇ ಕಾರ್ಯ ನಡೆಯುವುದಿಲ್ಲ. ನಡೆಯಲು, ನುಡಿಯಲು ಹೇಳಲು ಕೇಳಲು, ನೋಡಲು ಮಾಡಲು ಎಲ್ಲದಕ್ಕೂ ನಮ್ಮ ದೇಹದಲ್ಲಿ ಶಕ್ತಿ ಇರಬೇಕಾಗುತ್ತದೆ. ಅರ್ಧಾಂಗವಾಯು ಕಾಯಿಲೆಯಿಂದ ಬಳಲುವ ಮನುಷ್ಯನು ಯಾವುದೇ ದೈಹಿಕ ಕಾರ್ಯಗಳನ್ನು ಸರಿಯಾಗಿ ಮಾಡಲಾರನು. ಏಕೆಂದರೆ ಅವನ ದೈಹಿಕ ಶಕ್ತಿಯು ಕುಂದಿರುತ್ತದೆ, ಮಳೆ ಆಗುವುದಕ್ಕೆ, ಬೆಳೆ ಬರುವುದಕ್ಕೆ, ಗಾಳಿ ಬೀಸುವುದಕ್ಕೆ, ಸೂರ್ಯೋದಯ, ಚಂದ್ರೋದಯ ಆಗುವುದಕ್ಕೆ ಎಲ್ಲದಕ್ಕೂ ಶಕ್ತಿ ಬೇಕೇಬೇಕು. ಹೀಗೆ ಭೂಮ್ಯಾಕಾಶದಲ್ಲಿ ನಡೆಯುವ ಎಲ್ಲ ಕಾರ್ಯಗಳು ಶಕ್ತಿಯನ್ನೇ ಅವಲಂಬಿಸಿವೆ. ನಾವು ಈ ಭೂಮಿಗೆ ಬಂದಾಗಿನಿಂದ ಕೊನೆಯವರೆಗೆ ನಮ್ಮ ಹೃದಯವು ಒಂದು ಕ್ಷಣವೂ ಬಿಡದೆ ಬಡಿದುಕೊಳ್ಳುತ್ತದೆ. ಒಂದೇ ಒಂದು ಕ್ಷಣ ಶಕ್ತಿಯು ಇಲ್ಲದಾದರೆ ಹೃದಯದ ಬಡಿತ ನಿಂತುಬಿಡುತ್ತದೆ, ಜೀವನ ಯಾತ್ರೆ ಮುಗಿದುಬಿಡುತ್ತದೆ. ಹೃದಯವು ನಮ್ಮ ಮಾತು ಕೇಳುವುದಿಲ್ಲ. ಶಕ್ತಿ ಸಮೇತನಾದ ಶಿವನ ಮಾತು ಕೇಳುತ್ತದೆ. ಆದುದರಿಂದ ಆ ಶಿವನೇ ಪ್ರಭು ಅಥವಾ ಒಡೆಯನು. ಚಿಕ್ಕದಾದ ಸಂಚಾರಿ ದೂರವಾಣಿಯು ನಮ್ಮ ಧ್ವನಿಯನ್ನು ಪ್ರಪಂಚದ ಮೂಲೆ ಮೂಲೆಗೆ ಒಯ್ದು ತಲುಪಿಸುತ್ತದೆ. ನಮ್ಮ ಎದುರಿಗೆ ಕುಳಿತವರಿಗೆ ಒಮ್ಮೊಮ್ಮೆ ನಮ್ಮ ಮಾತು ಕೇಳುವುದಿಲ್ಲ. ಆದರೆ ಸಾವಿರ ಸಾವಿರ ಮೈಲುಗಳಾಚೆ ಇರುವ ನಿರ್ದಿಷ್ಟ ವ್ಯಕ್ತಿಗೆ ನಮ್ಮ ಮಾತು ಸ್ಪಷ್ಟವಾಗಿ ಕೇಳಿಸುವಂತೆ ಮಾಡುವ ಈ ಸಂಚಾರಿ ದೂರವಾಣಿಯ ಕಾರ್ಯ ಸಣ್ಣದೇನಲ್ಲ. ಅದಕ್ಕೂ ಒಂದು ಶಕ್ತಿ ಬೇಕೇ ಬೇಕು. 'ಶಕ್ತಿಮಯಂ ಏತತ್ ಜಗತ್!' ಹೀಗೆ ಈ ಜಗತ್ತೆಲ್ಲವೂ ಶಕ್ತಿಮಯವಾಗಿದೆ. ಈ ರೀತಿ ಜಗತ್ತಿನಲ್ಲಿರುವ ಭೌತಿಕ, ಅಭೌತಿಕ ಎಲ್ಲ ಶಕ್ತಿಗೆ ಮೂಲವಾದ ವಿಶ್ವಶಕ್ತಿ ಅಥವಾ ವಿಶ್ವಾತ್ಮಶಕ್ತಿಯೇ ಪರಶಿವ ಪರಮಾತ್ಮ. ಹೀಗೆ ಯಾವುದೋ ಒಂದು ಕಣ್ಣಿಗೆ ಕಾಣದ, ಕೈಗೆ ಸಿಗದ, ಬುದ್ಧಿಗೆ ಎಟುಕದ ಶಕ್ತಿಯೆ ಈ ಪ್ರಪಂಚದ ಎಲ್ಲ ಕಾರ್ಯಗಳಿಗೆ ಕಾರಣವಾಗಿದೆ. ಮಳೆ, ಬೆಳೆ, ಗಾಳಿ ಬೆಳಕು ಸಮಸ್ತ ಪ್ರಪಂಚವೇ ಆ ಶಕ್ತಿಯ ನಿಯಂತ್ರಣದಲ್ಲಿದೆ. ಅದು ಪರಶಿವ ಪರಮಾತ್ಮಶಕ್ತಿ, ಅದುವೇ ಈ ಜಗತ್ತಿಗೆ ಪ್ರಭು ಅಥವಾ ಒಡೆಯ. ಆ ಪರಶಿವನ ಆಜ್ಞೆಯಂತೆ ಈ ಜಗತ್ತು ನಡೆಯುತ್ತದೆ ವಿನಾ ನಮ್ಮ ಆಜ್ಞೆಯಂತಲ್ಲ. ನಮ್ಮ ಕೈ ಕಾಲು, ಮನ, ಬುಧ್ಯಾದಿಗಳೇ ನಮ್ಮ ಮಾತು ಕೇಳುವುದಿಲ್ಲ. ಕುಡಿಯಬಾರದು, ಸೇದಬಾರದು, ಕಳವು ಮಾಡಬಾರದು, ಸುಳ್ಳು ಹೇಳಬಾರದು ಎಂದು ನಮ್ಮ ಬುದ್ಧಿ ಹೇಳಿದರೂ ನಮ್ಮ ಮನಸ್ಸು ಕೇಳುವುದಿಲ್ಲ. ಒಟ್ಟಿನಲ್ಲಿ ಈ ಪ್ರಪಂಚದ ಒಡೆಯನು ಆ ಮಹಾದೇವನೇ ವಿನಾ ನಾವಲ್ಲ.