ಸಾಲ
ಮಾಡಿಕೊಂಡೆನಪ್ಪ ಸಾಲವನ್ನು , ತೀರಿಸಲಸಾಧ್ಯವಾಗಿದೆ ಇಂದು !
ತಿಳಿದು, ತಿಳಿಯದೋ ಮಾಡಿಕೊಂಡೆ ಸಾಲವೆಂಬ ಮದುವೆಯನ್ನು!
ತಿಂಗಳಿಗೊಮ್ಮೆ ಜನ್ಮ ಕೊಡುತ್ತಿರುವೆ ಬಡ್ಡಿಯೆಂಬ ಮಕ್ಕಳನ್ನು!
ಹೇಗಯ್ಯ ನಡೆಸಲಿ ಈ ಸಾಲವೆಂಬ ಸಂಸಾರವನ್ನು !
ಇದರಂತ್ಯ ಎಂದಿದಿಯೋ ತಿಳಿಯದಾಗಿದೆ ಒಂದೂ!
ಇನ್ನೆಷ್ಟು ಸಂಕಟವ ಪಡಬೇಕಯ್ಯ ಮುಂದು!
ಒಬ್ಬರ ನಂತರ ಒಬ್ಬರು ಬರುತಿಹರಯ್ಯ ಮನೆಗೆ ಸಾಲ ಕೊಟ್ಟವರು !
ಅವರಿಗೆಷ್ಟು ಸಮಾಧಾನ ಮಾಡಲಿ ನಾನು!
ಕೇಳುವವರಿಲ್ಲ ಯಾರೂ ನನ್ನ ಗೋಳು!
ಅಜ್ಞಾನದಿಂದ ಮಾಡಿರುವ ಈ ಸಾಲವು ಮೊದಮೊದಲು ಹಿತಕೊಟ್ಟು, ಹಿಂಡುತಿದೆ ಇಂದು ಪ್ರಾಣವನ್ನು!
ಇದರಿಂದ ಪಾರಗಲು ಇಹುದೇನಾದರು ದಾರಿಯ?
ದುಡಿಯುತ್ತಿರುವೆ ಸಾಲವ ತೀರಿಸಲು!
ಆದರೂ, ತಡೆದುಕೊಳ್ಳಲಾಗುತ್ತಿಲ್ಲ ಈ ಸಾಲದ ಭಾದೆ!
ಕಾಣದಂತಾಯಿತು ಸಂತೋಷವ ಈ ಬದುಕಿನೊಳಗೆ !
ಚಿಂತೆ ಹೆಚ್ಚಾಯಿತು, ಮನಸ್ಸು ಕಂಗಾಲಾಯಿತು!
ಎದೆ ಬಡಿತ ಹೆಚ್ಚುತ್ತ ದುಗುಡ ಉದ್ಭವಿಸಿತು!
ಊಟಮಾಡಲಾಗುತ್ತಿಲ್ಲ, ಎದ್ದೇಳಲಾಗುತ್ತಿಲ್ಲ!
ಕಾಲು ಮುರಿದ ಕೋಳಿಯಂತೆ ಬಿದ್ದಿರುವೆ ಮೂಲೆಯಲ್ಲಿ !
ಆದೆ ನಾನು ನಿಶ್ಯಕ್ತನಾದೆ! ಆದೆ ನಾನು ನಿಶ್ಯಕ್ತನಾದೆ!!!
ಸಂಕಟ ಬಂದಾಗ ವೆಂಕಟರಮಣ, ಮೆಚ್ಚುವನೇ ದೇವರು ಇದನ!
ಛೆ! ಛೆ! ಬರುಡು ಭೂಮಿಯಂತಾದೆ ಬಾಳಿನೊಳು!
ಯಾರೂಯಿಲ್ಲ ಸಹಾಯಕ್ಕೆಂದು , ಮಾಡಿದ್ದುಣ್ಣೋ ಮಾರಾಯ! ಎಂಬುದರಿವಾಗಿದೆ ಇಂದು , ಮುದುಕನಿಗಿರುವ ಕೋಲಾಸರೆಯು ಎನಗಿಲ್ಲ ಇಂದು !
ಹೆಂಡತಿ ದೂರಾದಾಗ ಆಗಲಿಲ್ಲ ಈ ನೋವು !
ಮಕ್ಕಳು ದೂರಿದಾಗ ಆಗಲಿಲ್ಲ ಈ ಸಂಟ !
ಅವಮಾನವಾದಾಗ ಆಗಲಿಲ್ಲ ಈ ಪರಿಯ ಭಾದೆ !
ಬದುಕಿ ಸತ್ತಂತೆ ಇರುವುದಕ್ಕಿಂತ ,
ಕೊನೆಯುಸಿರೆಳೆಯುವುದೇ ಲೇಸು ಎಂದೆನಿಸುತ್ತಿದೆ!
ಆದರೆ, ಸಾವೇ ಎಲ್ಲದಕ್ಕೂ ಪರಿಹಾರವಲ್ಲ
ಎಂದು ತಿಳಿದಿತ್ತು ಎಂದೋ!
ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಸಾಗುತಿದೆ ಬಾಳು!