~~~~~~~~~ಜೀವನ~~~~~~~~
👉 ಮೊದಲ ಬಾರಿಗೆ ಕಣ್ಣರೆಪ್ಪೆ ತೆರೆದರೆ
ಅದು ' ಜನನ '
ಕೊನೆಯ ಬಾರಿಗೆ ಕಣ್ಣರೆಪ್ಪೆ
ಮುಚ್ಚಿದರೆ ಅದು 'ಮರಣ '
ತೆರೆದು ಮುಚ್ಚುವ ನಡುವಣ
ಕ್ಷಣಗಳೆ ' ಜೀವನ '
👉 ನಮ್ಮ ಜನನ, ನಮ್ಮ ಆಯ್ಕೆ
ಅಲ್ಲದ ಘಟನೆ :
ನಮ್ಮ ಮರಣ ನಮ್ಮ ಅಧೀನದಲ್ಲಿ
ಇಲ್ಲದ ಅಂತ್ಯ. ಆದರೆ~ ನಮ್ಮ
ಜೀವನ ಮಾತ್ರ ನಾವೇ
ರೂಪಿಸಿಕೊಳ್ಳಬಹುದಾದ ಒಂದು
ಪಯಣ
👉 ಜೀವನದಲ್ಲಿ " ಬಾಲ್ಯವೆಂದರೆ
ಸ್ವಾಗತ " ಭಾಷಣ"
ಯೌವ್ವನವೆಂದರೆ ಉಪನ್ಯಾಸ;
ವೃದ್ಧಾಪ್ಯವೆಂದರೆ
ವಂದನಾರ್ಪಣೆ;
ಸಾವು ಎಂದರೆ ಶಾಂತಿಮಂತ್ರ.
~~ ನಿರೂಪಣಾಕಾರರ ಭಾಷೆಯಲ್ಲಿ
👉 ದೇವರು ನಮಗೆ ಜೀವನವನ್ನಲ್ಲ ,
ಜೀವವನ್ನಷ್ಟೆ ಕೊಟ್ಟ .
ಹೇಗೆ ಜೀವಿಸಬೇಕೆಂಬುದನ್ನು ಅವ
ನಮಗೆ ಬಿಟ್ಟುಕೊಟ್ಟ.
👉 ನೀರು ನಿಂತರೆ, ಕೊಳೆತು
ನಾರುತ್ತದೆ. ಹರಿದು ಹೋದರೆ
ತೊಳೆದು ತಿಳಿಯಾಗುತ್ತದೆ .
ನಮ್ಮ ಜೀವನ ನಿಂತ
ನೀರಾಗಬಾರದು;
ಅದು ಹರಿಯುವ
ಹೊಳೆಯಾಗಬೇಕು!
👉 ಜೀವನದಲ್ಲಿ ಕಷ್ಟಗಳು ನಮ್ಮನ್ನು
ನಾಶಗೊಳಿಸಲು ಬರೋದಿಲ್ಲ.
ಬದಲಾಗಿ
ನಮ್ಮನ್ನು ಇನ್ನಷ್ಟು
ಬಲಿಷ್ಟವಾಗಿಸಲು ಬರುತ್ತಿರುತ್ತದೆ !
👉 ಜೀವನವೆಂಬ ಬಯಲಾಟದಲ್ಲಿ
ಬಿದ್ದವ ಬಿದ್ದ.
ಎದ್ದವ ಎದ್ದ.
ಬಿದ್ದೂ ಏಳದವ
ನೆಗೆದು ಬಿದ್ದ.
👉 ಅಲೆಗಳೇ ಇಲ್ಲದ ಶಾಂತ
ಸಮುದ್ರ. ಸಮರ್ಥ
ಈಜುಗಾರನನ್ನು ಸೃಷ್ಟಿಸಲಾರದು.
ಅಂತೆಯೇ ಏಳುಬೀಳುಗಳಿಲ್ಲದ
ಜೀವನ, ಸಶಕ್ತ, ಸಮರ್ಥ
ವ್ಯಕ್ತಿಯನ್ನೆಂದೂ ನಿರ್ಮಿಸಲಾರದು .
👉. ಜೀವನವೆಂಬುದು ಒಂದು
ಪುಸ್ತಕವಿದ್ದಂತೆ
ಮೊದಲ ಪುಟ ಜನನವಾದರೆ ,
ಕೊನೆಯ ಪುಟ ಮರಣ .
ಇವೆರಡನ್ನು ಹೊರತುಪಡಿಸಿ,
ನಡುವಿನ ಹಾಳೆಗಳನ್ನು
ನಾವೇ ಬರೆದು
ತುಂಬಿಕೊಳ್ಳಬೇಕಾಗುತ್ತದೆ
👉 ಜೇಬು ಖಾಲಿಯಾದಾಗ,
ಎದುರಾಗುವ
ಒಂದೊಂದು ತಿರುವು ಕೂಡಾ
ಒಂದೊಂದು ಪಾಠವನ್ನು
ಹೇಳಿಕೊಡುತ್ತದೆ .
ಆದರೆ
ಜೇಬು ತುಂಬಿದಾಗ
ಎದುರಾಗುವ ಪ್ರತಿಯೊಂದು
ತಿರುವು ಕೂಡಾ
ನಮ್ಮನ್ನು ದಾರಿ
ತಪ್ಪುವಂತೆ ಮಾಡುತ್ತದೆ.
💐💐💐 ಶುಭೋದಯ💐💐💐