ಈ ಜೀವನ ಒಂದು ನಿಯಮಿತ. ಇಲ್ಲಿ ಶಾಶ್ವತವಾಗಿರುವುದೇನೂ ಇಲ್ಲ. ಯಾವ ಯಾವ ಸಮಯದಲ್ಲಿ ನಾವು ಹೇಗಿರಬೇಕೆಂಬುದನ್ನು ಅರಿತು. ಅದೇ ರೀತಿಯಲ್ಲಿ ಬದಕು ಸಾಗಿಸಿದರೆ ಅತ್ಯೋತ್ತಮ.
ಇಲ್ಲಿ ಮುಗಿಯಿತು ಎನ್ನುವ ಹಾಗೆ ಯಾವ ಒಂದು ಮಾತು ಸಹ ಇಲ್ಲ. ಇಲ್ಲಿ ಎಲ್ಲವೂ ಕೇವಲ ಆರಂಭ ಮಾತ್ರ.
ಈ ಸಮಯ ಎನ್ನುವುದು ಜೀವಂತ ಇಂದು ನಾಳೆ ನಾಡಿದ್ದು ಎಂದೂಚಲನ ಸ್ಥಿತಿಯಲ್ಲಿಯೇ ಇರುತ್ತದೆ. ಆದರೆ, ನಾವ ಸಾವಿಗೆ ಹತ್ತಿರವಾಗ್ತೇವೆ ಅಷ್ಟೇ.
ನಮಗೇನೋ ಒಂದು ಅಧಿಕಾರ ದೊರೆತಿದೆ ಎಂದಾದರೆ ಅದು ಒಂದು ಕಾಲಕ್ಕೆ ಮಾತ್ರ ಸೀಮಿತವಾಗಿರುತ್ತದೆ.ಆದನ್ನು ಶಾಶ್ವತ ಎಂದು ತಿಳಿಯಲಾಗುವುದಿಲ್ಲ.
ಯಾರೋ ಒಬ್ಬನ ಶಿಷ್ಯನಾಗಿರು, ಇಲ್ಲದಿದ್ದರೆ ಯಾವನಿಗೋ ಒಬ್ಬನಿಗೆ ಗುರುವಾಗಿರು ಮಧ್ಯದಲ್ಲಿರಬೇಡ ಅದು ನನಗೂ ನಿನಗೂ ಯಾರಿಗೂ ಒಳ್ಳೆಯದಲ್ಲ.