ನಾನಂದುಕೊಂಡಿದ್ದೆ ನಾನು ಎಲ್ಲರಿಗಿಂತ ಕೊಂಚ ಭಿನ್ನವೆಂದು,
ಆದರೆ, ನನಗೆ ಕೊನೆಗೂ ತಿಳಿಯಲಾಗಲಿಲ್ಲ
ನಾನು ಕೊಂಚವಲ್ಲ ಪ್ರಚಂಡ ಹುಚ್ಚನೆಂದು.
ಪ್ರಚಂಡ
ಸಕರಾತ್ಮಕ ಯೋಚನೆ
ನನಗೆ ಇತ್ತೀಚೆಗೇಕೊ ರಾತ್ರಿ ಒಂದು ಗಂಟೆಯಾದರೂ ನಿದ್ದೆ ಬರುತ್ತಿಲ್ಲ. ಸಕರಾತ್ಮಕ ಯೋಚನೆ ಬಂದು ಏನಾದರೂ ಸಿದ್ಧಿಸಿಕೊಳ್ಳೋಣ ಎಂದೆನಿಸುತ್ತೆ. ಆದರೆ, ಯಾವುದನ್ನು ಆಯ್ಕೆ ಮಾಡಿಕೊಳ್ಳುವುದೆಂದೇ ತಿಳಿಯುತ್ತಿಲ್ಲ.
ಸುಖವೇ ಸಿಗಲೆಂದು
ನಾನು ಮಾಡ್ತಿರೋದೆ ಸರಿ ಇಲ್ಲ ಅಂದಮೇಲೆ
ನನಗೆ ಬರೀ ಸುಖವೇ ಸಿಗಲೆಂದು ನಾನು ಬಯಸುವುದು,
ಇದು ಎಷ್ಟರ ಮಟ್ಟಿಗೆ ಸರಿ ???
ಅಧಿಕಾರ ದೊರೆತಿದೆ
ಈ ಜೀವನ ಒಂದು ನಿಯಮಿತ. ಇಲ್ಲಿ ಶಾಶ್ವತವಾಗಿರುವುದೇನೂ ಇಲ್ಲ. ಯಾವ ಯಾವ ಸಮಯದಲ್ಲಿ ನಾವು ಹೇಗಿರಬೇಕೆಂಬುದನ್ನು ಅರಿತು. ಅದೇ ರೀತಿಯಲ್ಲಿ ಬದಕು ಸಾಗಿಸಿದರೆ ಅತ್ಯೋತ್ತಮ.
ಇಲ್ಲಿ ಮುಗಿಯಿತು ಎನ್ನುವ ಹಾಗೆ ಯಾವ ಒಂದು ಮಾತು ಸಹ ಇಲ್ಲ. ಇಲ್ಲಿ ಎಲ್ಲವೂ ಕೇವಲ ಆರಂಭ ಮಾತ್ರ.
ಈ ಸಮಯ ಎನ್ನುವುದು ಜೀವಂತ ಇಂದು ನಾಳೆ ನಾಡಿದ್ದು ಎಂದೂಚಲನ ಸ್ಥಿತಿಯಲ್ಲಿಯೇ ಇರುತ್ತದೆ. ಆದರೆ, ನಾವ ಸಾವಿಗೆ ಹತ್ತಿರವಾಗ್ತೇವೆ ಅಷ್ಟೇ.
ನಮಗೇನೋ ಒಂದು ಅಧಿಕಾರ ದೊರೆತಿದೆ ಎಂದಾದರೆ ಅದು ಒಂದು ಕಾಲಕ್ಕೆ ಮಾತ್ರ ಸೀಮಿತವಾಗಿರುತ್ತದೆ.ಆದನ್ನು ಶಾಶ್ವತ ಎಂದು ತಿಳಿಯಲಾಗುವುದಿಲ್ಲ.
ಯಾರೋ ಒಬ್ಬನ ಶಿಷ್ಯನಾಗಿರು, ಇಲ್ಲದಿದ್ದರೆ ಯಾವನಿಗೋ ಒಬ್ಬನಿಗೆ ಗುರುವಾಗಿರು ಮಧ್ಯದಲ್ಲಿರಬೇಡ ಅದು ನನಗೂ ನಿನಗೂ ಯಾರಿಗೂ ಒಳ್ಳೆಯದಲ್ಲ.
ಮಾನವನಂತಿರೋ
ಅದು ತನ್ನನ್ನು ತಾನು, ಶ್ರೇಷ್ಟಾನೆಂದುಕೊಂಡಿರುತ್ತದೆ ಆದರೆ, ನಾಲ್ಕು ಜನರ ಮುಂದೆ ಅದರ ಕಿಮ್ಮತ್ತು ನಾಯಿಗಿಂತ ಕಡಿಮೆ ಇರುತ್ತೆ ಎಂಬುದು ಅದಕ್ಕೆ ತಿಳಿದಿರದು. ಅದು ಹಠ ಬಿದ್ದು ತನ್ನ ಆಸೆಯನ್ನು ಈಡೇರಿಸಿಕೊಳ್ಳಬಹುದೇನೋ ಆದರೆ, ಅದರಿಂದ ವಂಚಿತರಾದ ಜನರಿಂದ ಒಂದಲ್ಲ ಒಂದಿನ ಪಸ್ಚಾತ್ತಾಪಕ್ಕೆ ಗುರಿಯಾಗುತ್ತದೆ.
ಅದೃಷ್ಟವೇ ಹೌದೇನೋ
ಪದ ದಾರಿದ್ರ್ಯ
ಇದು ಆರಂಭದ ಬರವಣಿಗೆಯಲ್ಲಿ ಹೆಜ್ಜೆಯಿಡುತ್ತುರುವುದು. ಭಾಷಾ ಸಾಮರ್ಥ್ಯ ಕಡಿಮೆಯಿದೆ ಎಂಬುದು ನನ್ನ ಭಾವನೆ. ಕವಿಯಾಗಬೇಕೆಂದೇನಿಲ್ಲ. ಉತ್ತಮ ವಾಗ್ಮಿಯಾದರೆ ಸಾಕಂಬುದೇ ನನ್ನ ಈ ಲೇಖನಗಳ ಉದ್ದೇಶ. ಇವುಗಳಿಗೆ ಹೆಚ್ಚು ಅರ್ಥವೂ ಇರುವುದಿಲ್ಲ. ಕೊನೆಯಿಲ್ಲ, ಮೊದಲಿಲ್ಲ ಈ ನನ್ನ ಲೇಖನಗಳಿಗೆ. ನನ್ನ ಕಲ್ಪನೆಗೆ ನಿಲುಕುವಷ್ಟಕ್ಕೆ ಮಾತ್ರ ಸೀಮಿತವಾಗಿವೆ. " ನಾನೊಮ್ಮೆ ನಮ್ಮ ಕಾಲೇಜಿನಲ್ಲಿ ಕನ್ನಡ ಪಾಠ ಕೇಳುತ್ತ ಗೀಚುತ್ತಿದ್ದಾಗ ನಮ್ಮ ಗುರುಗಳ ಬಾಯಿಂದ ಒಂದು ವಾಕ್ಯವನ್ನು ಕೇಳಲ್ಪಟ್ಟೆ ಅದೇನೆಂದರೆ, " ಪದ ದಾರಿದ್ರ್ಯವುಳ್ಳವನು ಕವಿಯಾಗಲಾರನೆಂದು".
ಚಲನಚಿತ್ರದಲ್ಲಿ
ದಿನವಿಡೀ ಯೋಚನೆಯಲ್ಲಿಯೇ ಕಾಲ ಕಳೆಯುವಂತಾಗಿದೆ. ಬದುಕು ಸಾಗಲು ಬೇಕಂತೆ ಒಬ್ಬಳು ಉತ್ತಮ ಸಂಗಾತಿ. ಆದರೆ, ನಮ್ಮ ಮುಖಕ್ಕೆ ಯಾವೊಂದು ಹುಡುಗಿಯು ನೋಡುತ್ತಿಲ್ಲವಲ್ಲ ಮಾಡುವುದಾದರೂ ಏನು ? ನಾನೇನು ಅಷ್ಟೊಂದು ಕುರೂಪಿಯು ಅಲ್ಲ. ನಾನೂ ಅಲ್ಪ ಮಟ್ಟಿಗೆ ಸುರ ಸಂದರಾಂಗನೇ ಹೌದು. ಆದರೆ, ಯಾಕೆ ಹುಡುಗಿಯರು ನನ್ನನ್ನು ನೋಡುವುದಿಲ್ಲ ಎನ್ನುವುದೇ ಚಿಂತೆಯಾಗಿದೆ.
ಪ್ರೀತಿ ಮಾಡ್ಬೇಕು ಅಂತ ಹಂಬಲಿಸುವ ಮನಸ್ಸು ಒಮ್ಮೊಮ್ಮೆ ಪ್ರೀತಿ ಮಾಡುವ ಹುಡುಗಿಯು ಎದುರಿಗೆ ಬಂದಾಗ ಹೇಳದೆ ಕೇಳದೆಯೇ ಕಣ್ಣುಗಳನ್ನು ಬೇರೆ ಕಡೆಗೆ ತಿರುಗಿಸುತ್ತದೆ. ಇದೇಕೆ ಹೀಗೆ ಎಂಬುದೇ ತಿಳಿಯುತ್ತಿಲ್ಲ. ಪಾಪ ರವಿಚಂದ್ರನ್ ಸರ್ ಅವರ ಮಾತಿಗೆ ವಿರುದ್ಧವಾಗಿರುವೆವೆನೋ ನಾವು . ಅವರು ಒಮ್ಮೆ ಒಂದು ಚಲನಚಿತ್ರದಲ್ಲಿ ಹೀಗೆ ಹೇಳಿರುವುದುಂಟು ಅದುವೇ " ಪ್ರೀತಿ ಮಾಡಬಾರದು, ಮಾಡಿದರೆ ಜಗಕೆ ಹೆದರಬಾರದು" ಎಂದು.