ದಿನವಿಡೀ ಯೋಚನೆಯಲ್ಲಿಯೇ ಕಾಲ ಕಳೆಯುವಂತಾಗಿದೆ. ಬದುಕು ಸಾಗಲು ಬೇಕಂತೆ ಒಬ್ಬಳು ಉತ್ತಮ ಸಂಗಾತಿ. ಆದರೆ, ನಮ್ಮ ಮುಖಕ್ಕೆ ಯಾವೊಂದು ಹುಡುಗಿಯು ನೋಡುತ್ತಿಲ್ಲವಲ್ಲ ಮಾಡುವುದಾದರೂ ಏನು ? ನಾನೇನು ಅಷ್ಟೊಂದು ಕುರೂಪಿಯು ಅಲ್ಲ. ನಾನೂ ಅಲ್ಪ ಮಟ್ಟಿಗೆ ಸುರ ಸಂದರಾಂಗನೇ ಹೌದು. ಆದರೆ, ಯಾಕೆ ಹುಡುಗಿಯರು ನನ್ನನ್ನು ನೋಡುವುದಿಲ್ಲ ಎನ್ನುವುದೇ ಚಿಂತೆಯಾಗಿದೆ.
ಪ್ರೀತಿ ಮಾಡ್ಬೇಕು ಅಂತ ಹಂಬಲಿಸುವ ಮನಸ್ಸು ಒಮ್ಮೊಮ್ಮೆ ಪ್ರೀತಿ ಮಾಡುವ ಹುಡುಗಿಯು ಎದುರಿಗೆ ಬಂದಾಗ ಹೇಳದೆ ಕೇಳದೆಯೇ ಕಣ್ಣುಗಳನ್ನು ಬೇರೆ ಕಡೆಗೆ ತಿರುಗಿಸುತ್ತದೆ. ಇದೇಕೆ ಹೀಗೆ ಎಂಬುದೇ ತಿಳಿಯುತ್ತಿಲ್ಲ. ಪಾಪ ರವಿಚಂದ್ರನ್ ಸರ್ ಅವರ ಮಾತಿಗೆ ವಿರುದ್ಧವಾಗಿರುವೆವೆನೋ ನಾವು . ಅವರು ಒಮ್ಮೆ ಒಂದು ಚಲನಚಿತ್ರದಲ್ಲಿ ಹೀಗೆ ಹೇಳಿರುವುದುಂಟು ಅದುವೇ " ಪ್ರೀತಿ ಮಾಡಬಾರದು, ಮಾಡಿದರೆ ಜಗಕೆ ಹೆದರಬಾರದು" ಎಂದು.