Snap Deal Search

ಮಾನವನಂತಿರೋ

ಹೆದರದಿರಿ ಜನ ನಿಮ್ಮನ್ನು ಸಾಯಿಸಲು ಬರುವ ತನಕ ಹೆದರದಿರಿ. ಯಾರಾದರೂ ರಸ್ತೆಯ ಬದಿಯಲ್ಲಿ ನಿಂತು ಬೊಗಳುತ್ತಿದ್ದಾರೆಂದರೆ, ಅವರು ಬೊಗಳುವುದಕ್ಕೆ ಲಾಯಕ್ಕು ಎಂಬುದು ತೋರಿಸುತ್ತದೆ. ಉತ್ತಮನು ಯಾರನ್ನೂ, ಯಾವ ಕ್ಷಣದಲ್ಲೂ, ಯಾರನ್ನೂ ಕೆಣಕುವುದಿಲ್ಲ, ಹಿಂಸಿಸುವುದಿಲ್ಲ, ಚಿತ್ರ ಹಿಂಸೆ ಕೊಡುವುದಿಲ್ಲ. ಆದರೆ, ಯಾವುದೋ ಒಂದು ಮಾನವ ಜೀವಿ ಪದೇ ಪದೇ ಬಂದು ಹಿಂಸೆ ನೀಡುತ್ತದೆ ಎಂದರೆ ಅದು ಕೇವಲ ಮಾನವನಂತಿರೋ ಮೃಗವೇ ಹೊರತು ಮನುಷ್ಯನಲ್ಲ. ಅದೇನಿದ್ದರೂ, ಬಂದು ಬೊಗಳಿ ಹೋಗುವುದಷ್ಟೇ ಅದರ ಕೆಲಸ.
ಅದು ತನ್ನನ್ನು ತಾನು, ಶ್ರೇಷ್ಟಾನೆಂದುಕೊಂಡಿರುತ್ತದೆ ಆದರೆ, ನಾಲ್ಕು ಜನರ ಮುಂದೆ ಅದರ ಕಿಮ್ಮತ್ತು ನಾಯಿಗಿಂತ ಕಡಿಮೆ ಇರುತ್ತೆ ಎಂಬುದು ಅದಕ್ಕೆ ತಿಳಿದಿರದು. ಅದು ಹಠ ಬಿದ್ದು ತನ್ನ ಆಸೆಯನ್ನು ಈಡೇರಿಸಿಕೊಳ್ಳಬಹುದೇನೋ ಆದರೆ, ಅದರಿಂದ ವಂಚಿತರಾದ ಜನರಿಂದ  ಒಂದಲ್ಲ ಒಂದಿನ ಪಸ್ಚಾತ್ತಾಪಕ್ಕೆ ಗುರಿಯಾಗುತ್ತದೆ.