ಯಾವುದೇ ಕೆಲಸವನ್ನು ಮಾಡಬೇಕಾದರು ಪೂರ್ಣ ಸಿದ್ಧವಾಗಿ, ತಕ್ಕ ತಯಾರಿ ನಡೆಸಬೇಕು, ಪೂರ್ವ ಸಿದ್ಧತೆ ಇರಬೇಕು, ಆಗಲೆ ಆ ಕೆಲಸ ಯಶಸ್ವಿಯಾಗುವುದು. ಅದು ಬಿಟ್ಟು ಏನೂ ತಯರಿ ಇಲ್ಲದೆ ಮಾಡಲು ಹೊರಟರೆ ಯಾವ ಕೆಲಸವೂ ಯಶಸ್ವಿಯಾಗುವುದಿಲ್ಲ.
ಈ ಮೇಲಿನ ಗಾದೆಯನ್ನು ಮತ್ತೊಂದು ಗಾದೆಯಿಂದ ಸಮರ್ಥಿಸಬಹುದು. ’ಆಗ ಹುಟ್ಟಿ ಆಗ ಬೆಳೆದರಂತೆ’
’ಸಂತೆಯ ಹೊತ್ತಿಗೆ ಮೂರು ಮೊಳ ನೇಯ್ದರಂತೆ’
’ನವಿಲು ಜಾಗರವಾಡ್ತು ಅಂತ; ಕೆಂಬೂತ ಪುಕ್ಕ ತರೆದುಕೊಂಡಿತಂತೆ’
ನವಿಲಿಗೆ ಗರಿಗಳಿವೆ, ಅದು ಜಾಗರವಾಡಿದಾಗ ಬಹಳ ಸುಂದರವಾಗಿ ಕಾಣುತ್ತದೆ. ಆದರೆ ನವಿಲನ್ನು ನೋಡಿ ಕೆಂಬೂತ ತಾನೂ ಅದರಂತೆ ಚೆನ್ನಾಗಿ ಕಾಣಬೇಕೆಂದು ಪುಕ್ಕವಾನು ತರಿದು ಕೊಂಡರೆ ಇದ್ದ ಪುಕ್ಕವೂ ಉದುರಿಹೋಗಿ ಮೊದಲಿಗಿಂತ ಅಧ್ವಾನವಾಗಿ ಕಾಣುತ್ತದೆ. ಅದರಂತೆಯೆ ಯಾರೋ ಏನೋ ಮಾಡಿದರು ಎಂದು ತನ್ನ ಯೋಗ್ಯತೆಗೆ ನಿಲುಕದ, ತನ್ನ ಅಳವಿಗೆ ಬರದ ಕೆಲಸವನ್ನು ಮಾಡಬಾರದು ಎಂದಬುದೇ ಇದರ ಸಾರ.
’ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ’
ದೂರದಿಂದ ನೋಡಿದಾಗ ಯಾವುದೇ ವಸ್ತುವಿನ ಅಥವ ಸನ್ನಿವೇಶದ ಅರ್ಥವಾಗುವುದಿಲ್ಲ. ದೂರದಿಂದ ನೋಡಿದರೆ ಬೆಟ್ಟ ನುಣ್ಣಗೆ , ಸಮತಟ್ಟಾಗಿರುವಂತೆ ಕಾಣುತ್ತದೆ. ಆದರೆ ಹತ್ತಿರ ಹೋಗಿ ನೋಡಿದಾಗಲೆ ಅದರಲ್ಲಿರುವ ಗುಡ್ಡಗಳು, ಮರಗಿಡಗಳು, ಮುಳ್ಳುಗಳು ಎಲ್ಲ ಕಣ್ಣಿಗೆ ಕಾಣುವುದು. ಹಾಗೇ ಸಮಾಜದಲ್ಲಿ ನಮ್ಮ ಸುತ್ತ ಮುತ್ತ ಇರುವವರು, ನಮ್ಮ ನೆಂಟರಿಷ್ಟರು ಹಸನ್ಮುಖರಾಗಿ ಇರುವುದನ್ನು ನೋಡಿ ಅವರಿಗೆ ಯಾವುದೇ ಕಷ್ಟ್ಗಗಳಿಲ್ಲ, ಬರಿ ಸುಖ ಸಂತೋಷಗಳೆ ಎಂದು ಯೋಚಿಸುವುದು ಸರಿಯಲ್ಲ. ಏಕೆಂದರೆ ಅವರಿಗಿರುವ ಕಷ್ಟ ನಮಗೆ ಗೊತ್ತಿರುವುದಿಲ್ಲ.ಆದ್ದರಿಂದ ತನಗೆ ಬಂದ ಕಷ್ಟಗಲನ್ನು ನಗುನಗುತ್ತ ಎದುರಿಸಬೇಕು, ಪ್ರಪಂಚದಲ್ಲಿ ಎಲ್ಲರಿಗು ಕಷ್ಟಬರುತ್ತದೆ ಎಂಬ ಅಂಶವನ್ನು ನೆನಪಿನಲ್ಲಿಡಬೇಕು.ಅದು ಬಿಟ್ಟು ತನಗೇ ಎಲ್ಲ ಕಷ್ಟಗಳನ್ನು ಕೊಟ್ಟಿದ್ದಾನೆ ಎಂದು ಯೋಚಿಸುವುದು ತಪ್ಪು ಎಂದು ಈ ಗಾದೆ ಹೇಳುತ್ತದೆ
ಇದಕ್ಕೆ ಸಂಬಂಧಿಸಿದಂತೆ ಇನ್ನೊಂದು ಗಾದೆಯಿದೆ- ’ಎಲ್ಲರ ಮನೆಯ ದೋಸೆಯೂ ತೂತೆ’ಯಾರ ಮನೆಯಲ್ಲಿ ದೋಸೆ ಹುಯ್ದರೂ ತೂತು ಇದ್ದೇ ಇರುತ್ತದೆ. ಈ ಮಾತು ನೆನಪಿನಲ್ಲಿ ಇಟ್ಟೂಕೊಂಡರೆ ಜೀವನ ಹಗುರವಾಗುತ್ತದೆ. ಅದುಬಿಟ್ಟು ನನ್ನ ಮನೆಯಲ್ಲಿ ಮಾತ್ರ ಕಷ್ಟ ಬಂದಿದೆ ಎಂದು ಚಿಂತೆ ಮಾಡುತ್ತ ಕುಳಿತಿರುವುದು ತಪ್ಪು.ಕಾವಲಿಯಲ್ಲೇ ತೂತುಬೀಳದಂತೆ ನೋಡಿಕೊಳ್ಳಬೇಕು.
ಗಡ್ಡಕ್ಕೆ ಬೆಂಕಿ ಬಿದ್ದಾಗ ಬಾವಿ ತೋಡಿದಂತೆ.
ಗಡ್ಡಕ್ಕೆ ಬೆಂಕಿ ಬಿದ್ದಾಗ ಬಾವಿ ತೋಡಿದಂತೆ. ಕನ್ನಡದ ಪ್ರಸಿದ್ಧ ಗಾದೆಮಾತು. ನಮ್ಮ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಾಗಿ ಬಳಸುವ ಮಾತು. ಗಡ್ಡಕ್ಕೆ ಬೆಂಕಿ ಹತ್ತಿಕೊಂಡ ನಂತರ ಬಾವಿ ತೊಡುವುದರಿಂದ ಆಗುವ ಪ್ರಯೋಜನ ಶೂನ್ಯ. ಗಡ್ಡಕ್ಕೆ ಬೆಂಕಿ ಹತ್ತಿಕೊಂಡ ನಂತರ ಗಡ್ಡಕ್ಕೆ ತಗುಲಿರುವ ಬೆಂಕಿ ನಂದಿಸಲು ನೀರಿಗಾಗಿ ಬಾವಿ ತೋಡಲು ಹೊರಟರೆ ಗಡ್ಡ ಉರಿದು ಕ್ರಮೇಣ ಮುಖಕ್ಕೆ ಆವರಿಸುವ ಸಂಭವ ಹೆಚ್ಚು ಆದ್ದರಿಂದ ಯಾವಾಗಲು ಮುನ್ನೆಚ್ಚರಿಕೆ ವಹಿಸುವುದು ಅತ್ಯಗತ್ಯ.ಮಾಡಬೇಕಾದ ಕೆಲಸವನ್ನು ಸರಿಯಾದ ಸಮಯದಲ್ಲಿ ಮಾಡುವುದು ಉತ್ತಮ. ಮಾಡುವ ಕೆಲಸವನ್ನು ಮುಂದೂಡುತ್ತಾ ಬಂದಹಾಗೆ ಅದು ನಮ್ಮ ಮುಂದಾಗುವ ಕೆಲಸಗಳ ಮೇಲೆ ಪರಿಣಾಮ ಬೀರುತ್ತದೆ. ಈ ಗಾದೆಯ ಒಳ ಅರ್ಥ ಸಮಯ ಪ್ರಜ್ಞೆಯ ಪ್ರಾಮುಖ್ಯತೆ.
ಕನಸೇ ಸಾಧನೆಯ ಮೊದಲ ಹಜ್ಜೆ
"ಕನಸೇ ಸಾಧನೆಯ ಮೊದಲ ಹೆಜ್ಜೆ"
ಮನೆ ಕಟ್ಟುವ ಮೊದಲು ಮನೆಗೆ ಅಡಿಪಾಯ ಹಾಕುವುದು ಎಷ್ಟು ಮುಖ್ಯವೋ ಸಾಧಿಸುವ ಛಲ ಇರುವವರು ಮೊದಲು ಕನಸು ಕಾಣಬೇಕು ಎನ್ನುತ್ತದೆ ಕನ್ನಡದ ನಾಣ್ಣುಡಿಯೊಂದು.
ಮೊದಲು ಕನಸು , ನಂತರ ಗುರಿ , ತದನಂತರ ಪ್ರಯತ್ನ. ಈ ಸೂತ್ರದ ಫಲವೇ ಸಾಧನೆ.
******
ಅಲ್ಪವಿದ್ಯೆ ಮಹಾಗರ್ವಿ
" ಅಲ್ಪವಿದ್ಯೆ ಮಹಾಗರ್ವಿ "
ನಾವು ವಿದ್ಯೆ ಕಲಿತು ವಿದ್ಯಾಂತರಾಗಬೇಕು. ಕಲಿತ ವಿದ್ಯೆ ಪರಿಪೂರ್ಣವಿರಬೇಕು. ನಾಲ್ಕು ದಿನ ತರಗತಿಯಲ್ಲಿ ಕುಳಿತು ನಾನೆಲ್ಲ ಕಲಿತುಬಿಟ್ಟೆ ಎನ್ನುವುದು ಗರ್ವದ ಮಾತಾಗುತ್ತದೆ. ಅದಕ್ಕೆ ಹೇಳುವುದು ಅಲ್ಪ ವಿದ್ಯೆ ಮಹಾಗರ್ವಿ ಎಂದು. ಯಾರೇ ಆಗಲಿ ತಾವು ಕೆಲಸ ಮಾಡುವ ಕ್ಷೇತ್ರವನ್ನು ಕುರಿತಂತೆ ತಕ್ಕಷ್ಟು ಜ್ಞಾನ ಸಂಪಾದಿಸಿಕೊಂಡಿರಬೇಕು. ಅಲ್ಪ ತಿಳುವಳಿಕೆ ಅಪಾಯಕಾರಿ. ವಿಷಯದ ಬಗ್ಗೆ ಎಲ್ಲವನ್ನೂ ತಿಳಿದುಕೊಂಡು, ಗೊತ್ತಿಲ್ಲದಿದ್ದರೆ ಬೇರೆಯವರ ಬಳಿ ತಿಳಿದುಕೊಂಡಾದರೂ ಮಾತನಾಡಬೇಕು. ಅಲ್ಲದೆ ಅಲ್ಪವಿದ್ಯೆ ಅಥವಾ ವಿಷಯದ ಬಗ್ಗೆ ಜ್ಞಾನ ಕಡಿಮೆಯಿದ್ದವರು ಮಹಾಜ್ಞಾನಿಯಂತೆ ಬೀಗಲು ಹೋಗಬಾರದು. ಏಕೆಂದರೆ ನಾವೊಂದು ವಿಷಯದ ಕುರಿತು ಸಂಪೂರ್ಣವಾಗಿ ತಿಳಿದುಕೊಂಡು ಮಾತನಾಡುವುದಕ್ಕೂ , ಅಲ್ಪಸ್ವಲ್ಪ ತಿಳಿದು ತನಗೆ ಎಲ್ಲವೂ ಗೊತ್ತಿದೆ ಎಂದು ಬೀಗುವುದಕ್ಕೂ ಬಹಳ ವ್ಯತ್ಯಾಸವಿದೆ. ತುಂಬಿದ ಕೊಡ ತುಳುಕುವುದಿಲ್ಲವೆಂಬ ಗಾದೆಮಾತು ಇದಕ್ಕೆ ಪೂರಕವಾಗಿದೆ. ಪೂರ್ತಿ ತುಂಬಿದ ಕೊಡ ಹೇಗೆ ತುಳುಕುವುದಿಲ್ಲವೋ ಅಂತೆಯೇ ಪೂರ್ಣಜ್ಞಾನಿಯಾದವನು ಎಲ್ಲವೂ ತನಗೆ ಗೊತ್ತಿದೆ ಎಂದು ಎಲ್ಲೂ ಬೀಗುವುದಿಲ್ಲ. ಅಲ್ಪಸ್ವಲ್ಪ ತಿಳಿದವರು ಮಾತ್ರ ಅಹಂಕಾರದಿಂದ ಬೀಗುತ್ತಾರೆ.
ಏನಾಗಲಿ ಮುಂದೆ ಸಾಗು ನೀ.
"ಏನಾಗಲಿ ಮುಂದೆ ಸಾಗು ನೀ, ಬಯಸಿದ್ದೆಲ್ಲ ಸಿಗದು ಬಾಳಲಿ."
ಎಲ್ಲಾ ದುರಂತಗಳಿಗೂ ಕಾರಣ ಒಂದು ನಮ್ಮ ಮನಸ್ಸು,ಇನ್ನೊಂದು ಆಕಸ್ಮಿಕ. ನಾವು ಸದಾಕಾಲ ಸಕಾರಾತ್ಮಕವಾಗಿ ವಿಚಾರ ಮಾಡುತ್ತ ದಿನಗಳೆದರೆ, ನಮ್ಮ ಸ್ಥಿತ ಪ್ರಜ್ಞೆಯಲ್ಲಿ ನಾವಿದ್ದರೆ, ನಮ್ಮ ಇಂದ್ರಿಯಗಳ ಮೇಲೆ ನಿಗಾ ಇರುವುದೇಯಾದರೆ ನಾವು ಎಲ್ಲಾ ಘಟನೆ,ಸಂಧರ್ಭಗಳನ್ನು ಆತ್ಮವಲೋಕನ ಮಾಡುತ್ತ ಮನೋಲ್ಲಾಸದಿಂದಿರಬಹುದು.
ಮನುಷ್ಯನಿಗೆ ಜೀವನದಲ್ಲಿ "
ಕಳೆದುಕೊಂಡ ಪ್ರೀತಿ,
ಹಸಿದ ಹೊಟ್ಟೆ,
ಖಾಲಿ ಜೇಬು. ಈ ಮೂರು ಅತ್ಯುತ್ತಮವಾದಂತಹ ಪಾಠವನ್ನ ಕಲಿಸುತ್ತವೆ.
ನಾವು ಇಷ್ಟ ಪಡೋರು ನಮ್ಮನ್ನು ಇಷ್ಟ ಪಡಲ್ಲ.
ನಮ್ಮನ್ನು ಇಷ್ಟ ಪಡೋರ್ನ ನಾವು ಇಷ್ಟ ಪಡಲ್ಲ ,ಒಂದು ವೇಳೆ ನಮಗಿಬ್ಬರಿಗೂ ಇಷ್ಟ ಆದರೆ, ಆ ದೇವರಿಗೆ ಇಷ್ಟ ಆಗಲ್ಲ.ಹೀಗೊಂದು ಮಾತೂ ಇದೆ.ಆದರೆ ಮೊದಲೆರಡು ಸಾಲುಗಳು ನಿಜವಾಗಿವೆ ಆದರೆ ಮೂರನೆಯದು ಮಾತ್ರ ಅನುಭವ ಆಗಿಲ್ಲ.
ಕೊನೆಗೂ, " ಏನಾಗಲಿ ಮುಂದೆ ಸಾಗು ನೀ, ಬಯಸಿದ್ದೆಲ್ಲ ಸಿಗದು ಬಾಳಲಿ .
* ನಾವು ಬಯಸಿದ್ದು ನಮಗೆ ಸಿಗಲಿಲ್ಲವೆಂದಾದರೆ, ಅದರ ಅವಶ್ಯಕತೆ ನಮಗಿಲ್ಲವೆಂದು ತಿಳಿಯಬೇಕು. ಅದರಿಂದ ಹೆಚ್ಚು ಶೋಕ ಪಡುವುದನ್ನು ತಡೆದಂತಾಗುವುದು.
ಹಗಲುಗನಸು
ಎಷ್ಟು ಜ್ಞಾನ ತಿಳಿದರೆ ಸಾಕಾಗುವುದು ಈ ಜೀವನಕ್ಕೆ. ಎಲ್ಲವನ್ನೂ ತಿಳಿಯಲು ನಮಗಷ್ಟು ಆಯಸ್ಸು ಇಲ್ಲ. ಚಾಣಕ್ಯ ಅವರು ಅದಕ್ಕೆ ' ಬೇರೆಯವರ ತಪ್ಪುಗಳಿಂದ ಕಲಿ ,ಎಲ್ಲಾ ತಪ್ಪುಗಳನ್ನು ನೀನೆ ಮಾಡಿ ಅನುಭವಿಸುವಷ್ಟು ಆಯಸ್ಸು ನಿನಗಿಲ್ಲ. ಎಂದು ಹೇಳಿದ್ದಾರೆ.
ಕಾಲೇಜಿಗೆ ಹೋಗುತ್ತಿರುವ ನಾನು, ಓದುವುದು, ಬರೆಯುವುದು, ಜ್ಞಾನ ಸಂಪಾದನೆ ಮಾಡುವುದನ್ನು ಬಿಟ್ಟು ಇನ್ನಿತರೆ ಆಕರ್ಷಣೆ/ವಿಕರ್ಷಣೆಗಳಿಗೆ ಬಲಿಯಾಗುತ್ತಿರವೆನು. ಕಾಲೇಜಿನ ಆರಂಭದ ದಿನದಿಂದಲೇ ಕ್ರಮವಾಗಿ ಪ್ರಾಮಾಣಿಕವಾಗಿ ಓದುತ್ತೀನಿ,ಬರೆಯುತ್ತೀನಿ ಎಂದು ಏನೆಲ್ಲಾ ಕನಸು ಕಂಡೆ; ಹಾಗೆಯೇ ಆದಷ್ಟು ಪ್ರಯತ್ನವೂ ಪಟ್ಟೆ. ಓದಿ ಓದಿ ಸಾಕಾಯಿತು ನನ್ನ ಓದಿನ ದಾರಿ. ಸ್ವತಂತ್ರವಾಗಿ ಮೋಬೈಲ್ನಲ್ಲಿ ಬ್ಲಾಗ್ಸ್ ಗಳನ್ನು ತೆರೆದು ಕಥೆ , ಕವನ , ಸುಭಾಷಿತಗಳು, ನುಡಿಮುತ್ತುಗಳು, ಆಚಾರ-ವಿಚಾರಗಳು , ಲಿರಿಕ್ಸ್ಗಳು, ಧರ್ಮಗ್ರಂಥ, ಭಗವದ್ಗೀತೆ , ಕಗ್ಗಗಳು , ಗಾದೆಗಳು, ದಿನಪತ್ರಕೆ , ವಚನಗಳು , ಸಾಹಿತ್ಯಗಳು , ವಿಮರ್ಶೆಗಳು ಮುಂತಾದವುಗಳು ಎಲ್ಲವನ್ನೂ ಓದುತ್ತಿರುವ ನನಗೆ ಕಾಲೇಜಿನಲ್ಲಿ ಕನ್ನಡ ವಿಷಯಯೊಂದನ್ನು ಬಿಟ್ಟು ಬೇರೆ ವಿಷಯಗಳು ಓದಲು ಇಷ್ಟವಾಗುತ್ತಿರಲಿಲ್ಲ.
ಕನ್ನಡ,ಇಂಗ್ಲೀಷ್,ಹಿಂದಿ ಓದಲು , ಬರೆಯಲು ಬಂದರೂ ಮನಸ್ಸು ಚಂಚಲತೆಯಿಂದ ಕೂಡಿಕೊಂಡಿರುತ್ತದೆ ವಿದ್ಯಾಭ್ಯಾಸ ಮಾಡೋಣ ಎಂದರೆ ಮನಸ್ಸಾಗುವುದಿಲ್ಲ. ಯಾರ ಜೊತೆಯಾದರು ಮಾತಾಡೋದು ಅಂದರೆ ತುಂಬಾ ಇಷ್ಟ ಸಾಕಾಗುವಷ್ಟು ಮಾತಾಡುತ್ತೇನೆ . ಆದರೆ, ಹೀಗೇ ಕೆಲವು ದಿನಗಳ ಹಿಂದೆ ಗಾದೆಗಳನ್ನ ಓದುವಾಗ " ಮಾತು ಬಂದಾಗ ಸೋತವನೇ ಜಾಣ" ಎಂದಿತ್ತು ಅದನ್ನಳವಡಿಸಿಕೊಂಡೆ ಇತ್ತೀಚಿಗೆ ಮಾತಾಡುವುದನ್ನ ಸ್ವಲ್ಪ ಕಡಿಮೆ ಮಾಡಿದ್ದೀನೆ. ಆದರೆ, ಅವಶ್ಯ ಬಿದ್ದಾಗ ಮಾತ್ರ ಟೀಕೆಗಳಿಗೆ ಹೆದರುವವನಲ್ಲ.
" ನಾನು ಕಾಲವನ್ನು ನಂಬುತ್ತೇನೆ ; ಅದರ ಇಚ್ಛೆಯಂತೆಯೇ ನಡೆಯುತ್ತದೆ ಅದರ ವಿರುದ್ಧವಾಗಿ ನಡೆಯಲು ಯಾರಿಂದಲೂ ಸಾಧ್ಯವಿಲ್ಲ. ಅದರ ಜೊತೆ ಹೊಂದಾಣಿಕೆಯಾಗಬೇಕಷ್ಟೆ."
" ತಾನೇ ತಿಳಿದವನೆಂಬ ಗರ್ವ, ಬೇರೆಯವರ ಮಾತಿಗೆ ಕೊಡನವ ಗೌರವ , ಆಧಾರ ರಹಿತ ಗಟ್ಟಿವಾದ ಮಾಡುವವ, ಹೀನ ಶಬ್ದದಿ ನಿಂದಿಸುತ, ನಕಸಿಖಾಂತ ಕೋಪದಲಿ ಮುಳುಗಿದಾತ. ಈ ಐದೂ ಗುಣಗಳನ್ನು ಹೊಂದಿದವನು ಮೂರ್ಖನಾಥ .
ಸಮಯ ಹಾಳು ಮಾಡುವುದು ಬೇಡ.
"ಸಮಯ ಹಾಳು ಮಾಡುವುದು ಅಂದ್ರೆ ದುಡ್ಡು ಹಾಳು ಮಾಡಿದಂತೆಯೇ ಸರಿ."
" Time is money "
ಓಡಿ ಹೋದ ಹುಡುಗಿ ಮತ್ತೆ ಮರಳಿ ಬರಬಹುದು, ಕಳೆದು ಹೋದ ಚಪ್ಪಲಿ ಮತ್ತೆ ಸಿಗಬಹುದು ಆದರೆ, ಕಳೆದು ಹೋದ ಸಮಯ ಯಾವತ್ತೂ ಮರಳಿ ಬರುವುದಿಲ್ಲ.
ಇರುವ ಸಮಯದಲ್ಲಿಯೇ ಒಳ್ಳೆಯ ಹವ್ಯಾಸಗಳನ್ನು ರೂಢಿಸಿಕೊಂಡು ಹಸನ್ಮುಖರಾಗಿ ಕಾರ್ಯಶೀಲರಾಗಬೇಕು.
"ಮನುಷ್ಯನಿಗೆ ಮೊದಲು ಗುರಿ ಮುಖ್ಯ "
ಒಳ್ಳೆಯ ಗುರಿಯನ್ನು ಆಯ್ಕೆ ಮಾಡಿಕೊಂಡರೆ ಇತರೆ ಅಡೆತಡೆಗಳಿಗೆ ಮುಖ ಮಾಡದೆ ಗುರಿ ಮುಟ್ಟಲು ಪ್ರಾಮಾಣಿಕ ಪ್ರಯತ್ನದ ಕಡೆಗೆ ಮಾತ್ರ ಗಮನವಿರಬೇಕು. ಅದನ್ನೆಲ್ಲ ಬಿಟ್ಟು ವ್ಯರ್ಥ ಕಾಲಹರಣ ಮಾಡುವದು ಮೂರ್ಖತನದ ಲಕ್ಷಣವು ಎದ್ದು ತೋರಿಸುವುದು.
ಸ್ವಾಮಿ ವಿವೇಕಾನಂದರು ಯಶಸ್ಸಿನ ಬಗ್ಗೆ " ಸತತ ಪ್ರಯತ್ನ ಮತ್ತು ಧೃಡ ಸಂಕಲ್ಪವಿದ್ದಾಗ ಮಾತ್ರ ಯಶಸ್ಸು ಸಾಧಿಸಬಹುದು" ಎಂದು ಹೇಳುತ್ತಾರೆ. ಸತತವಾಗಿ ಅಂದರೆ ವ್ಯರ್ಥ ಚಟುವಟಿಕೆಗಳಿಗೆ ಸಮಯ ಹಾಳು ಮಾಡಬಾರದು ಅಂತ.
" ಮಾಡು ಇಲ್ಲವೇ ಮಡಿ "
- ಗಾಂಧೀಜಿ
"ಯಾವೊಬ್ಬ ಸಾಧಕನೂ ಅನೇಕ ತಪ್ಪುಗಳನ್ನು ಮಾಡದೆ ಯಶಸ್ಸು ಸಾಧಿಸಲಾರನು."
ಮುಕ್ತಿ
ಮುಕ್ತಿ ! ಮುಕ್ತಿ ! ನನ್ನ ನಾನು / ತಿಳಿದುಕೊಳ್ವುದೋ ,
ಸಾವಿಗಂಜಿ ನಿನ್ನಡಿಯಲಿ / ಅಡಗಿಕೊಳ್ವುದೋ ?
- ಕೆ.ಎಸ್.ನರಸಿಂಹಸ್ವಾಮಿ
ಸರ್ವಜ್ಞ ತ್ರಿಪದಿ
ಗುರುವಿಂದ ಬಂಧುಗಳು ,
ಗುರುವಿಂದ ದೈವಗಳು
ಗುರುವಿಂದಲಿಹುದು ಪುಣ್ಯವದು ,
ಜಗಕ್ಕೆಲ್ಲ ಗುರುವಿಂದ ಮುಕ್ತಿ ಸರ್ವಜ್ಞ
***-*-***-*-***-*-***-*-***-*-***
ಏ ! ಅಲ್ಪಜ್ಞಾನಿ
°°°°°°°°°°°°°°°°°°°°°°°°°°°°°°°°°°°°
ಏ ! ಮೂರ್ಖ ಎಲ್ಲಿದ್ದೀಯೋ ಸಾಕು ನಿನ್ನ ಒಣ ಆಡಂಬರದ ಮಾತುಗಳು ಬಾ ಇಲ್ಲಿ; ಒಂದೊಮ್ಮೆ ನಿನ್ನ ಒಳಗಣ್ಣನ್ನು ತೆರೆದು ಈ ಲೋಕದ ವೈವಿಧ್ಯಮಯ ಚಿತ್ತಾರವನ್ನ ನೋಡಲು ಹಪಹಪಿಸಿ ಓಡಿ ಬಾ. ಸಾಕಿನ್ನು ತಡಮಾಡದೆ ತಟ್ಟು ನಿನ್ನ ಆಂತರ್ಯವನ್ನು. ನನಗೆ ತಿಳಿದಿರುವುದು ದಿವ್ಯ ಜ್ಞಾನವೆಂದು ಇನ್ನೂ ಆ ಭ್ರಮೆಯಲ್ಲಿಯೆ ಮಂಕು ಬುದ್ಧಿಯ ತೋರಿಸಬೇಡ. 'ಜ್ಞಾನವೆಂಬುವುದು ಸಮುದ್ರದಂತೆ ; ಅದರಲ್ಲಿ ನಿನ್ನದು ಇನ್ನೂ ಒಂದು ಹನಿಯಷ್ಟೇ , ನಾನು ಇನ್ನೂ ತಿಳಿದುಕೊಳ್ಳುವ ವಿಷಯಗಳು ತುಂಬಾ ಇವೆ ಎಂದು ಜ್ಞಾನದ ಗುಹೆಯೊಳಗೆ ನುಗ್ಗು. ಸ್ಥಿತ ಪ್ರಜ್ಞೆಯಲ್ಲಿರು; ಸಕರಾತ್ಮಕ ಯೋಚನೆಯಲ್ಲೇ ಕಾಲ ಕಳಿಯಲು ಮುಂದಾಗು........!!!
**********
ನಾವು ಏನನ್ನು ಬೇಕಾದರೂ ಸಾಧಿಸಬಹುದು ಆದರೆ ನಮ್ಮ ಆಲೋಚನೆಗಳೇ ನಮ್ಮನ್ನು ಹಾಳು ಮಾಡುತ್ತವೆ.
************
ಎಲ್ಲಾದಕ್ಕೂ ಮೂಲ ಕಾರಣ ನಮ್ಮ ಮನಸ್ಸು.
************
ಮನಸ್ಸಿದ್ದರೆ ಮಾರ್ಗ.
*****