Snap Deal Search

ಸಮಯ ಹಾಳು ಮಾಡುವುದು ಬೇಡ.

            "ಸಮಯ ಹಾಳು ಮಾಡುವುದು ಅಂದ್ರೆ ದುಡ್ಡು ಹಾಳು ಮಾಡಿದಂತೆಯೇ ಸರಿ."
     " Time is money "

              ಓಡಿ ಹೋದ ಹುಡುಗಿ ಮತ್ತೆ ಮರಳಿ ಬರಬಹುದು, ಕಳೆದು ಹೋದ ಚಪ್ಪಲಿ ಮತ್ತೆ ಸಿಗಬಹುದು ಆದರೆ, ಕಳೆದು ಹೋದ ಸಮಯ ಯಾವತ್ತೂ ಮರಳಿ ಬರುವುದಿಲ್ಲ.

                       ಇರುವ ಸಮಯದಲ್ಲಿಯೇ ಒಳ್ಳೆಯ ಹವ್ಯಾಸಗಳನ್ನು ರೂಢಿಸಿಕೊಂಡು ಹಸನ್ಮುಖರಾಗಿ ಕಾರ್ಯಶೀಲರಾಗಬೇಕು.
"ಮನುಷ್ಯನಿಗೆ ಮೊದಲು ಗುರಿ ಮುಖ್ಯ "
ಒಳ್ಳೆಯ ಗುರಿಯನ್ನು ಆಯ್ಕೆ ಮಾಡಿಕೊಂಡರೆ ಇತರೆ ಅಡೆತಡೆಗಳಿಗೆ ಮುಖ ಮಾಡದೆ ಗುರಿ ಮುಟ್ಟಲು ಪ್ರಾಮಾಣಿಕ ಪ್ರಯತ್ನದ ಕಡೆಗೆ ಮಾತ್ರ ಗಮನವಿರಬೇಕು. ಅದನ್ನೆಲ್ಲ ಬಿಟ್ಟು ವ್ಯರ್ಥ ಕಾಲಹರಣ ಮಾಡುವದು ಮೂರ್ಖತನದ ಲಕ್ಷಣವು ಎದ್ದು ತೋರಿಸುವುದು.

               ಸ್ವಾಮಿ ವಿವೇಕಾನಂದರು ಯಶಸ್ಸಿನ ಬಗ್ಗೆ   " ಸತತ ಪ್ರಯತ್ನ ಮತ್ತು ಧೃಡ ಸಂಕಲ್ಪವಿದ್ದಾಗ ಮಾತ್ರ ಯಶಸ್ಸು ಸಾಧಿಸಬಹುದು" ಎಂದು ಹೇಳುತ್ತಾರೆ. ಸತತವಾಗಿ ಅಂದರೆ ವ್ಯರ್ಥ ಚಟುವಟಿಕೆಗಳಿಗೆ ಸಮಯ ಹಾಳು ಮಾಡಬಾರದು ಅಂತ.

  " ಮಾಡು ಇಲ್ಲವೇ ಮಡಿ "
                             - ಗಾಂಧೀಜಿ
"ಯಾವೊಬ್ಬ ಸಾಧಕನೂ ಅನೇಕ ತಪ್ಪುಗಳನ್ನು ಮಾಡದೆ ಯಶಸ್ಸು ಸಾಧಿಸಲಾರನು."