ಎಷ್ಟು ಜ್ಞಾನ ತಿಳಿದರೆ ಸಾಕಾಗುವುದು ಈ ಜೀವನಕ್ಕೆ. ಎಲ್ಲವನ್ನೂ ತಿಳಿಯಲು ನಮಗಷ್ಟು ಆಯಸ್ಸು ಇಲ್ಲ. ಚಾಣಕ್ಯ ಅವರು ಅದಕ್ಕೆ ' ಬೇರೆಯವರ ತಪ್ಪುಗಳಿಂದ ಕಲಿ ,ಎಲ್ಲಾ ತಪ್ಪುಗಳನ್ನು ನೀನೆ ಮಾಡಿ ಅನುಭವಿಸುವಷ್ಟು ಆಯಸ್ಸು ನಿನಗಿಲ್ಲ. ಎಂದು ಹೇಳಿದ್ದಾರೆ.
ಕಾಲೇಜಿಗೆ ಹೋಗುತ್ತಿರುವ ನಾನು, ಓದುವುದು, ಬರೆಯುವುದು, ಜ್ಞಾನ ಸಂಪಾದನೆ ಮಾಡುವುದನ್ನು ಬಿಟ್ಟು ಇನ್ನಿತರೆ ಆಕರ್ಷಣೆ/ವಿಕರ್ಷಣೆಗಳಿಗೆ ಬಲಿಯಾಗುತ್ತಿರವೆನು. ಕಾಲೇಜಿನ ಆರಂಭದ ದಿನದಿಂದಲೇ ಕ್ರಮವಾಗಿ ಪ್ರಾಮಾಣಿಕವಾಗಿ ಓದುತ್ತೀನಿ,ಬರೆಯುತ್ತೀನಿ ಎಂದು ಏನೆಲ್ಲಾ ಕನಸು ಕಂಡೆ; ಹಾಗೆಯೇ ಆದಷ್ಟು ಪ್ರಯತ್ನವೂ ಪಟ್ಟೆ. ಓದಿ ಓದಿ ಸಾಕಾಯಿತು ನನ್ನ ಓದಿನ ದಾರಿ. ಸ್ವತಂತ್ರವಾಗಿ ಮೋಬೈಲ್ನಲ್ಲಿ ಬ್ಲಾಗ್ಸ್ ಗಳನ್ನು ತೆರೆದು ಕಥೆ , ಕವನ , ಸುಭಾಷಿತಗಳು, ನುಡಿಮುತ್ತುಗಳು, ಆಚಾರ-ವಿಚಾರಗಳು , ಲಿರಿಕ್ಸ್ಗಳು, ಧರ್ಮಗ್ರಂಥ, ಭಗವದ್ಗೀತೆ , ಕಗ್ಗಗಳು , ಗಾದೆಗಳು, ದಿನಪತ್ರಕೆ , ವಚನಗಳು , ಸಾಹಿತ್ಯಗಳು , ವಿಮರ್ಶೆಗಳು ಮುಂತಾದವುಗಳು ಎಲ್ಲವನ್ನೂ ಓದುತ್ತಿರುವ ನನಗೆ ಕಾಲೇಜಿನಲ್ಲಿ ಕನ್ನಡ ವಿಷಯಯೊಂದನ್ನು ಬಿಟ್ಟು ಬೇರೆ ವಿಷಯಗಳು ಓದಲು ಇಷ್ಟವಾಗುತ್ತಿರಲಿಲ್ಲ.
ಕನ್ನಡ,ಇಂಗ್ಲೀಷ್,ಹಿಂದಿ ಓದಲು , ಬರೆಯಲು ಬಂದರೂ ಮನಸ್ಸು ಚಂಚಲತೆಯಿಂದ ಕೂಡಿಕೊಂಡಿರುತ್ತದೆ ವಿದ್ಯಾಭ್ಯಾಸ ಮಾಡೋಣ ಎಂದರೆ ಮನಸ್ಸಾಗುವುದಿಲ್ಲ. ಯಾರ ಜೊತೆಯಾದರು ಮಾತಾಡೋದು ಅಂದರೆ ತುಂಬಾ ಇಷ್ಟ ಸಾಕಾಗುವಷ್ಟು ಮಾತಾಡುತ್ತೇನೆ . ಆದರೆ, ಹೀಗೇ ಕೆಲವು ದಿನಗಳ ಹಿಂದೆ ಗಾದೆಗಳನ್ನ ಓದುವಾಗ " ಮಾತು ಬಂದಾಗ ಸೋತವನೇ ಜಾಣ" ಎಂದಿತ್ತು ಅದನ್ನಳವಡಿಸಿಕೊಂಡೆ ಇತ್ತೀಚಿಗೆ ಮಾತಾಡುವುದನ್ನ ಸ್ವಲ್ಪ ಕಡಿಮೆ ಮಾಡಿದ್ದೀನೆ. ಆದರೆ, ಅವಶ್ಯ ಬಿದ್ದಾಗ ಮಾತ್ರ ಟೀಕೆಗಳಿಗೆ ಹೆದರುವವನಲ್ಲ.
" ನಾನು ಕಾಲವನ್ನು ನಂಬುತ್ತೇನೆ ; ಅದರ ಇಚ್ಛೆಯಂತೆಯೇ ನಡೆಯುತ್ತದೆ ಅದರ ವಿರುದ್ಧವಾಗಿ ನಡೆಯಲು ಯಾರಿಂದಲೂ ಸಾಧ್ಯವಿಲ್ಲ. ಅದರ ಜೊತೆ ಹೊಂದಾಣಿಕೆಯಾಗಬೇಕಷ್ಟೆ."
" ತಾನೇ ತಿಳಿದವನೆಂಬ ಗರ್ವ, ಬೇರೆಯವರ ಮಾತಿಗೆ ಕೊಡನವ ಗೌರವ , ಆಧಾರ ರಹಿತ ಗಟ್ಟಿವಾದ ಮಾಡುವವ, ಹೀನ ಶಬ್ದದಿ ನಿಂದಿಸುತ, ನಕಸಿಖಾಂತ ಕೋಪದಲಿ ಮುಳುಗಿದಾತ. ಈ ಐದೂ ಗುಣಗಳನ್ನು ಹೊಂದಿದವನು ಮೂರ್ಖನಾಥ .