ಕಾಲೇಜು ಹೋಗುವ ಮೊದಲೆ ಪ್ರತಿಯೊಬ್ಬ ವಿದ್ಯಾರ್ಥಿಯು ಇನ್ನು ಮುಂದೆಯಾದರೂ ಚೆನ್ನಾಗಿ ಓದೋಣ ಎಂದು ನಿರ್ಧಾರ ಮಾಡಿರುತ್ತಾರೆ. ಇಲ್ಲಿಯವರೆಗೆ ಮಾಡಿರುವ ಎಲ್ಲಾ ಚೇಷ್ಟೆಗಳನ್ನು ಕಡಿಮೆ ಮಾಡಿ ಪ್ರೀತಿ ಪ್ರೇಮ ಅನ್ನೋ ಬಲೆಯೊಳಗೆ ಬೀಳಬಾರದೆಂದು ಯೋಚನೆ ಮಾಡಿರುತ್ತಾರೆ.
ಹಾಗೆಯೇ, ಉತ್ತಮ ಅಂಕಗಳನ್ನು ಪಡೆಯಬೇಕೆಂಬ ನಿರೀಕ್ಷೆಯು ಇನ್ನೊಂದು ಕಡೆ. ಕಾಲೇಜು ಆರಂಭದ ಕೆಲವು ದಿನಗಳಲ್ಲಿ ಎಷ್ಟು ನಯ-ವಿನಯ , ನಾಚಿಕೆ , ಶಿಸ್ತು , ಬುದ್ಧಿವಂತಿಕೆ ಪ್ರದರ್ಶನ , ಒಣ ಆಡಂಬರದ ಮಾತುಗಳು , ಹಾಸ್ಯ ಪ್ರಸಂಗ , ಮೊಬೈಲ್ ಬಳಕೆ , ನಾನೆಂಬ ಅಹಂ , ನಾಯಕತ್ವ ವಹಿಸಿಕೊಳ್ಳಲು ಶಿಕ್ಷಕರ ಹಾಗೂ ಸಹಪಾಠಿಗಳ ಜೊತೆ ಆತ್ಮೀಯ ಸಂಬಂಧ, ಕಡಿಮೆ ಮಾತು , ಹುಡುಗಿಯರ ಎದುರಿಗೆ ಸಭ್ಯರಂತೆ ವರ್ತಿಸುವುದು , ಯಾರನ್ನೂ ನೋಡಿಯು ನೋಡದ ಹಾಗೆ ನಟಿಸುವುದು , ಆಹಾ! ಮುಖದಲ್ಲಿ ಮಂದಹಾಸ ; ಎದೆಯಲ್ಲಿ ತಳಮಳ , ಯಾರೂ ನೋಡದೆ ಇದ್ದರೂ ಎಲ್ಲರೂ ನನ್ನೇ ನೋಡುತ್ತಿದ್ದಾರೆ ಎಂಬ ಭ್ರಮೆ.
ಹೇಗೇಗೋ ಸುಧಾರಿಸು ಕುಳಿತುಕೊಳ್ಳಲು ಹೋಗಿ ಎಡವಿ ನಾಚಿಕೆಗೀಡು ಮಾಡುವ ಸಂಧರ್ಭದಲ್ಲಿ ಎಲ್ಲರನ್ನೂ ನೋಡಿ ಅಬ್ಬ! ಯಾರೂ ನೋಡುತ್ತಿಲ್ಲವೆಂದು ತಿಳಿದು ಎಡವಿದರಲ್ಲೇ ಮತ್ತೊಂದು ಶೈಲಿಯಲ್ಲಿ ಏಳುವುದು. ಅದೇ ತರಗತಿಯ ಕೋಣೆಯಲ್ಲಿ ಪಾಠ ಮಾಡುವಾಗ ಸರಿಯಾಗಿ ಕೇಳಿ , ಹೇಳಿ ತಿಳಿದುಕೊಂಡರೂ ಕಿರು-ಪರೀಕ್ಷೆ/ ಪರೀಕ್ಷೆಯಲ್ಲಿ ಕಡಿಮೆ ಅಂಕ ಗಳಿಸುವುದು; ಇಲ್ಲವಾದರೆ ಅನುತ್ತೀರ್ಣ ಆಗುವ ಸಂಭವವು ಹೆಚ್ಚು.
ಆದರೆ, ಯಾಕೆ ಹೀಗಾವುದುಎಂದು ಪ್ರಶ್ನೆ ಮಾಡಿದರೆ ಕೆಲವೊಂದು ಅಂಶಗಳು ಗೋಚರವಾಗುತ್ತವೆ ಅವುಗಳು :
1} ಕಾಲೇಜು ಅರಂಭದಿಂದ ಚೆನ್ನಾಗಿ ಓದಬೇಕೆಂದುಕೊಂಡಿರುತ್ತಾರೆಯೇ ಹೊರತು ಕಾರ್ಯ ರೂಪಕ್ಕೆ ತರುವುದಿಲ್ಲ.
2} ಆರಂಭದಿಂದಲೇ ಕ್ರಮವಾಗಿ ಪ್ರತಿ ದಿನವೂ ಓದುವುದಿಲ್ಲ.
3} ಹೆಚ್ಚು ಶ್ರಮವಹಿಸಿ ವಿದ್ಯಾಭ್ಯಾಸದಲ್ಲಿ ತೊಡಗುವುದಿಲ್ಲ.
4} ಮೊಬೈಲ್ ಬಳಕೆಯಲ್ಲಿಯೇ ಅತೀ ಹೆಚ್ಚು ಕಾಲ ಕಳೆಯುತ್ತಾರೆ.
5} ದುಶ್ಚಟಗಳಿಗೆ ಹೊಂದಿಕೊಂಡು ಗೆಳೆಯರ ಜೊತೆ ಸುಮ್ಮನೆ ಕಾಲ ಹರಣ ಮಾಡುತ್ತಾರೆ.
6} ಅತಿಯಾಗಿ ಟಿ.ವಿ ನೋಡುವುದು , ಹಾಡು ಕೇಳುವುದು , ಮಲಗುವುದರಿಂದ.
7} ಸಮಯದ ಮಹತ್ವ ತಿಳಿಯದೆ ಇರುವುದರಿಂದ .
8} ಜೀವನದ ಮೌಲ್ಯಗಳ ಬಗ್ಗೆ ಅರಿವಿಲ್ಲದಿರುವುದರಿಂದ.
9} ಎಲ್ಲವನ್ನೂ ನಕಾರಾತ್ಮಕವಾಗಿ ಯೋಚನೆ ಮಾಡುವುದರಿಂದ.
10} ನಾಳೆ ಮಾಡೋಣ ಎನ್ನುವ ಆಲಸ್ಯತನದಿಂದ.